ತಿರುವನಂತಪುರಂ: ಕೇರಳ ಆಡಳಿತ ಸೇವೆಗೆ (ಕೆಎಎಸ್) ಹೆಚ್ಚಿನ ಇಲಾಖೆಗಳ ಸೇರ್ಪಡೆಗೆ ಇಂದು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.
ಇಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕೇರಳದ ಆಡಳಿತ ಸೇವೆಯಲ್ಲಿನ 29 ಇಲಾಖೆಗಳಲ್ಲಿನ 10 ಶೇ. ಅನ್ನು 20 ಶೇ. ಕ್ಕೆ ಹೆಚ್ಚಿಸಲಾಗುವುದು ಎಂದು ಸೂಚಿಸಲಾಗಿದೆ. ಇನ್ನು ಪೋಸ್ಟ್ ಇಲ್ಲದಿದ್ದರೆ 8 ವರ್ಷಗಳ ನಂತರ ಮುಂದಿನ ಅಧಿಸೂಚನೆ ಬರುತ್ತದೆ.
ಕಳೆದ ವರ್ಷದಿಂದ ಸೇವಾ ಕೋಟಾ ಹೆಚ್ಚಳಕ್ಕೆ ಯೋಜನೆ ಹಾಕಿಕೊಂಡಿದ್ದು, ನಾನಾ ಕಡೆಯಿಂದ ವಿರೋಧ ವ್ಯಕ್ತವಾದ ಕಾರಣ ನಿರ್ಧಾರ ವಿಳಂಬವಾಗಿತ್ತು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋಟಾ ಹೆಚ್ಚಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ವಿವಿಧ ಇಲಾಖೆಗಳಲ್ಲಿನ ಕೋಟಾವನ್ನು ಶೇ 10 ರಿಂದ 20 ರಷ್ಟು ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಆದರೆ ಕೆಎಎಸ್ ಕೋಟಾ ಹೆಚ್ಚಿಸಬೇಕಾದರೆ ಈಗಿನ ವಿಶೇಷ ನಿಯಮಕ್ಕೆ ತಿದ್ದುಪಡಿ ತರಬೇಕು. ಪ್ರಸ್ತುತ ಸೆಕ್ರೆಟರಿಯೇಟ್ ಸೇರಿದಂತೆ 30 ಇಲಾಖೆಗಳಲ್ಲಿ ಕೆಎಎಸ್ ನೇಮಕಾತಿ ಶೇ.10ರಷ್ಟಿದೆ. ಈ ವμರ್Áಂತ್ಯದೊಳಗೆ ಅಧಿಸೂಚನೆ ಹೊರಡಿಸಿ ಮುಂದಿನ ವರ್ಷ ಹೊಸ ನೇಮಕಾತಿ ಆಗುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಮಾಹಿತಿ ನಿರೀಕ್ಷಿಸಲಾಗಿದೆ.