ಕಾಸರಗೋಡು: ಜಿಲ್ಲೆಯಲ್ಲಿ ಪಿಡಬ್ಲ್ಯುಡಿ, ವಿದ್ಯುತ್, ಭೂಗರ್ಭಜಲ, ಲೋಕೋಪಯೋಗಿ,ಪ್ರವಾಸೋದ್ಯಮ ಇಲಾಖೆಯ ನೌಕರರ ಕೊರತೆ ನೀಗಿಸಲುಲೋಕೋ ನೌಕರರ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ-ಪ್ರವಾಸೋದ್ಯಮ ಖಾತೆ ಸಚಿವ ಮುಹಮ್ಮದ್ ರಿಯಾಸ್ ಭರವಸೆ ನೀಡಿದ್ದಾರೆ.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿ.ಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ದೂರುಪರಿಹಾರ ಅದಾಲತ್ ಮೂಲಕ ಸಲ್ಲಿಸಿದ್ದ ದೂರು ಪರಿಗಣಿಸಿ ಸಚಿವ ಮಹಮ್ಮದ್ ರಇಯಾಸ್ ಈ ಭರವಸೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಲೋಕೋಪಯೋಗಿ ಹಾಗೂ ವಿದ್ಯುತ್ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಕೊರತೆಯಿಂದ ಜಿಲ್ಲಾ ಪಂಚಾಯಿತಿಯ ಹಲವು ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಪಿಡಬ್ಲ್ಯುಡಿ ವಿದ್ಯುತ್ ವಿಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿಳಂಬ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು, ಜಿಲ್ಲಾ ಅಂತರ್ಜಲ ವಿಭಾಗದಲ್ಲಿ ಭೂವಿಜ್ಞಾನಿ ನೇಮಕ ಮಾಡಬೇಕು ಎಂಬುದು ಮತ್ತೊಂದು ಬೇಡಿಕೆಯಾಗಿದೆ.
ಪಿಡಬ್ಲ್ಯುಡಿಯಲ್ಲಿನ ನೌಕರರ ಕೊರತೆ ನೀಗಿಸಲು ತುರ್ತು ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಮಹಮ್ಮದ್ ರಿಯಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರಿಗೆ ಭರವಸೆ ನೀಡಿದರು..