HEALTH TIPS

ಪತ್ನಿಯರ ಬೆತ್ತಲೆ ಫೋಟೋ ಶೇರ್​ ಮಾಡುವ ಆಯಪ್​: ಸಿಕ್ಕಿಬಿದ್ದ ಆರೋಪಿಯಿಂದ ಆಯಪ್​ ಕರಾಳತೆ ಬಯಲು

                   ತ್ರಿಸ್ಸೂರ್​: ಸೆಕ್ಸ್​ ಚಾಟ್​ ಆಯಪ್​ನಲ್ಲಿ ಪತ್ನಿಯ ಬೆತ್ತಲೆ ಫೋಟೋಗಳನ್ನು ಶೇರ್​​ ಮಾಡುತ್ತಿದ್ದ ದುಷ್ಟ ಪತಿಯನ್ನು ಕೇರಳದ ಎರುಮಪೆಟ್ಟಿ ಪೊಲೀಸರು ಬಂಧಿಸಿದ್ದಾರೆ.

                                ವರದಕ್ಷಿಣೆ ಕಿರುಕುಳ

               ಬಂಧಿತನ್ನು ಸೆಬಿ (33) ಎಂದು ಗುರುತಿಸಲಾಗಿದೆ. ಈತ ಮಂದಂಪರಂಬು ಮೂಲದವನು. ಎರುಮಪೆಟ್ಟಿ ಠಾಣೆಯ ಸಬ್​ ಇನ್ಸ್​ಪೆಕ್ಟರ್ ಟಿ.ಸಿ. ಅನುರಾಜ್​ ಎಂಬುವರು ಆರೋಪಿ ಸೆಬಿಯನ್ನು ಬಂಧಿಸಿದ್ದಾರೆ. ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಿರುವ ಆರೋಪ ಸಹ ಸೆಬಿಯ ಮೇಲಿದೆ.

                              ಬೆತ್ತಲೆ ಫೋಟೋಗಳ ಸೆರೆ

                       ಆರೋಪಿ ಸೆಬಿ ಎರಡೂವರೆ ವರ್ಷಗಳ ಹಿಂದೆ ಪಲಕ್ಕಾಡ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದರು. ಆರ್ಥಿಕವಾಗಿ ಸ್ಥಿತಿವಂತರಲ್ಲದ ಪತ್ನಿಯ ಕುಟುಂಬದಿಂದ ಹತ್ತು ಸವರನ್​ ಚಿನ್ನವನ್ನು ವರದಕ್ಷಿಣೆಯಾಗಿ ಸ್ವೀಕರಿಸಿದ್ದರು. ಇದಾದ ಬಳಿಕ ಹೆಚ್ಚಿನ ವರದಕ್ಷಿಣೆಗಾಗಿ ಸೆಬಿ ಮತ್ತು ಆತನ ಕುಟುಂಬದವರು ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದರು. ಬಲವಂತವಾಗಿ ಮದ್ಯ ಕುಡಿಸಿ, ಪತ್ನಿಯನ್ನು ಸೆಬಿ ಹಿಂಸಿಸುತ್ತಿದ್ದ. ಈ ಬಗ್ಗೆ ಮನೆಯವರಿಗೆ ಹೇಳಿ ಯಾಕೆ ಅವರನ್ನು ಚಿಂತೆಗೀಡುಮಾಡಬೇಕು ಅಂತ ತಾನೇ ನೋವು ಅನುಭವಿಸುತ್ತಿದ್ದಳು. ಇದರ ನಡುವೆ ಆಕೆಯ ಬೆತ್ತಲೆ ಫೋಟೋಗಳನ್ನು ಸೆರೆಹಿಡಿದು ಸ್ಲೀಜಿ ಆಪ್‌ನಲ್ಲಿ ಆರೋಪಿ ಪತಿ ಶೇರ್ ಮಾಡಿದ್ದಾನೆ.

                                       ನಗ್ನ ಚಿತ್ರಗಳ ವಿನಿಮಯ

            ಪೊಲೀಸರು ಆರೋಪಿ ಸೆಬಿ ಫೋನ್​ ಅನ್ನು ಪರಿಶೀಲಿಸಿದಾಗ ಪತ್ನಿಯರ ನಗ್ನ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವ ಆಯಪ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಎಂದು ಕಂಡುಬಂದಿದೆ. ಪತ್ನಿಯರನ್ನು ಪರಿಚಯಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಈ ಅಪ್ಲಿಕೇಶನ್ ಅನ್ನು ಬಳಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುನ್ನಂಕುಲಂ ಸಹಾಯಕ ಆಯುಕ್ತ ಟಿ.ಎಸ್. ಶಿನೋಜ್ ನೇತೃತ್ವದ ತಂಡ ತನಿಖೆ ಆರಂಭಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries