ಪೆರ್ಲ: ಕಾಸರಗೋಡು ಜಿಲ್ಲಾ ಮಿಲ್ಮಾ ಸಹಾಯಕ ಪ್ರಬಂಧಕರಾಗಿ ಸ್ತುತ್ಯಾರ್ಹ ಸೇವೆ ಸಲ್ಲಿಸಿದ ಮಾಧವನ್ ಅವರನ್ನು ಎಣ್ಮಕಜೆ ಗ್ರಾಮ ಪಂಚಾಯತಿನ ಪೆರ್ಲ, ಚವರ್ಕಾಡ್,ಕಾಟುಕುಕ್ಕೆ,ಪಳ್ಳ,ಪಡ್ರೆ,ಶೇಣಿ ಕ್ಷೀರೋತ್ಪಾದಕ ಸಹಕಾರಿ ಸಂಘದ ಆಶ್ರಯದಲ್ಲಿ ಗೌರವಿಸಲಾಯಿತು. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನ ಸಭಾಂಗಣದಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವಿಸಲಾಯಿತು. ಪೆರ್ಲ ಕ್ಷೀರೋತ್ಪಾದಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಎಸ್, ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಶ್ಯಾಮಲ ಪತ್ತಡ್ಕ,ಪಳ್ಳಂ ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಕೃಷ್ಣ, ಕಾಟುಕುಕ್ಕೆ ಕ್ಷೀರೋತ್ಪಾದಕ ಸಹಕಾರಿ ಸಂಘದ ಸುಬ್ರಹ್ಮಣ್ಯ ಭಟ್ ಕೋಡುಮಾಡು, ಪಡ್ರೆ ಕ್ಷೀರೋತ್ಪಾದಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಭಟ್ ಅಜಕ್ಕಳಮೂಲೆ,ಪೆರ್ಲ ಕ್ಷೀರೋತ್ಪಾದಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪ್ರಸಾದ ಕುಮಾರ್.ಎಸ್, ಅಭಿನಂದಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗೌರವಾರ್ಪಣೆಯ ಮಾನ ಪತ್ರವನ್ನು ಸೂರ್ಯನಾರಾಯಣ ಭಟ್ ಸಪರ್ಂಗಲ್ಲು ವಾಚಿಸಿದರು.ಮಾರಜ ಸೈಪಂಗಲ್ಲು ಪ್ರಾರ್ಥನೆ ಹಾಡಿದರು. ಪೆರ್ಲ ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಕುದ್ವ ಸ್ವಾಗತಿಸಿ ಕೇಶವ ಭಟ್ ವಂದಿಸಿದರು. ನಳಿನಿ ಸೈಪಂಗಲ್ಲು ನಿರೂಪಿಸಿದರು.