ನವದೆಹಲಿ: ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 'ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ'ಯು(ಸಿಯುಇಟಿ-ಯುಜಿ) ಬೋರ್ಡ್ ಪರೀಕ್ಷೆಗಳನ್ನು ಅಪ್ರಸ್ತುತಗೊಳಿಸುವುದಿಲ್ಲ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಹೇಳಿದ್ದಾರೆ.

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇ 90 ಹಾಗೂ ಶೇ 95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಗಳಿಗೆ ಈ ವರ್ಷ ಪದವಿ ಕೋರ್ಸ್‌ಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಬರುವ ದಿನಗಳಲ್ಲಿ ಬೋರ್ಡ್ ಪರೀಕ್ಷೆಗಳನ್ನು ಅಪ್ರಸ್ತುತಗೊಳಿಸುವ ಉದ್ದೇಶದಿಂದ ಸಿಯುಇಟಿ ಆರಂಭಿಸಲಾಗಿದೆ ಎಂಬ ಚರ್ಚೆಗೆ ಇದು ಕಾರಣವಾಗಿತ್ತು.
'ವಿಶ್ವವಿದ್ಯಾಲಯಗಳ ಕೋರ್ಸ್‌ಗೆ ಪ್ರವೇಶ ಬಯಸುವ ಅಭ್ಯರ್ಥಿಯು ಮಾನ್ಯತೆ ಇರುವ ಯಾವುದೇ ಮಂಡಳಿ ಅಥವಾ ತತ್ಸಮಾನ ಸಂಸ್ಥೆಯಿಂದ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು. ಅರ್ಹತೆಗೆ ಸಂಬಂಧಿಸಿದ ಈ ಮೂಲ ಮಾನದಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರವೇಶ ಬಯಸುವ ಕೋರ್ಸ್‌ಗಳು ಹಾಗೂ ವಿಶ್ವವಿದ್ಯಾಲಯಕ್ಕೆ ತಕ್ಕಂತೆ 12ನೇ ತರಗತಿಯಲ್ಲಿ ಪಡೆದಿರಬೇಕಾದ ಅಂಕಗಳಲ್ಲಿ ವ್ಯತ್ಯಾಸ ಇದೆ' ಎಂದು ಜಗದೀಶ್ ಕುಮಾರ್ ಹೇಳಿದ್ದಾರೆ.
'ಬೋರ್ಡ್ ಪರೀಕ್ಷೆಯು ವಿದ್ಯಾರ್ಥಿಯ ಸಾಧನೆ ಅಳೆಯುವ ಮಾನದಂಡವಾಗಿದ್ದರೆ, ಸಿಯುಇಟಿ ಆಯ್ಕೆಗಾಗಿ ನಡೆಸುವ ಪರೀಕ್ಷೆ. ಹೀಗಾಗಿ, 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಅಪ್ರಸ್ತುತವಾಗುವ ಸಾಧ್ಯತೆಯೇ ಇಲ್ಲ' ಎಂದು ಅವರು ಹೇಳಿದ್ದಾರೆ.