ಕೊಚ್ಚಿ: ಹಬ್ಬದ ಸಂದರ್ಭದಲ್ಲಿ ಆನೆಗಳು ಮತ್ತು ಮಾವುತರು ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನಕ್ಕೆ ಕೊಂಡೊಯ್ಯುವಾಗ ಸಾಕಷ್ಟು ವಿಶ್ರಾಂತಿ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಇದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವಂತೆಯೂ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಆನೆಗಳಿಗೆ ಬಳಸಲು, ಸ್ನಾನ ಮಾಡಲು ದೇವಾಲಯಗಳಲ್ಲಿ ದೊಡ್ಡ ಟ್ಯಾಂಕ್ ಅಥವಾ ಕೊಳಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿ ಸೊಸೈಟಿ ಫಾರ್ ಎಲಿಫೆಂಟ್ ವೆಲ್ಫೇರ್ ಸಲ್ಲಿಸಿದ ಅರ್ಜಿಯ ಮೇಲೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‍ವಿ ಭಟ್ಟಿ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ವಿಭಾಗೀಯ ಪೀಠವು ನಿನ್ನೆ ಈ ಸಲಹೆಗಳನ್ನು ಎತ್ತಿಹಿಡಿದಿದೆ.
ಅರ್ಜಿಯಲ್ಲಿ ಸರ್ಕಾರವಲ್ಲದೆ ತಿರುವಾಂಕೂರು, ಕೊಚ್ಚಿ, ಮಲಬಾರ್ ಮತ್ತು ಗುರುವಾಯೂರ್ ದೇವಸ್ವಂ ಮಂಡಳಿಗಳಿಗೂ ನೋಟಿಸ್ ನೀಡಲಾಗಿದೆ. ದೇವಾಲಯಗಳಲ್ಲಿ ಆನೆಗಳಿಗೆ ಸ್ನಾನ ಮಾಡಲು ದೊಡ್ಡ ತೊಟ್ಟಿಗಳನ್ನು ನಿರ್ಮಿಸಬೇಕು ಎಂಬುದು ಮನವಿಯಲ್ಲಿನ ಆಗ್ರಹವಾಗಿದೆ. ಈಗ ಆನೆಗೆ ಮೆದುಗೊಳವೆ(ಸ್ಮೂತ್ ಪೈಪ್) ಬಳಸಿ ನೀರು ಎರಚಲಾಗುತ್ತದೆ. ಇದು ಸಾಕಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ತಮಿಳುನಾಡಿನಂತೆ 10 ಮೀಟರ್ ಉದ್ದ, 10 ಮೀಟರ್ ಅಗಲ ಮತ್ತು 1.5 ರಿಂದ 2 ಮೀಟರ್ ಆಳದ ತೊಟ್ಟಿಗಳಲ್ಲಿ ಆನೆಗಳನ್ನು ಸಾಕಬೇಕು ಮತ್ತು ಕನಿಷ್ಠ ಮೂರು ಗಂಟೆಗಳ ಕಾಲ ಆನೆಗಳನ್ನು ಸ್ನಾನ ಮಾಡಿಸಬೇಕು ಎಮದಿದೆ. ಕೇರಳದಲ್ಲಿ ಅಂತಹ ನಿಯಮ ಇಲ್ಲದಿರುವುದರಿಂದ ಹೈಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂಬುದು ಅರ್ಜಿದಾರರ ವಾದ. ಜುಲೈ 26 ರಂದು ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ.