ತಿರುವನಂತಪುರ: ಡಾ. ವಂದನಾ ದಾಸ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ರಾಷ್ಟ್ರೀಯ ಮಹಿಳಾ ಆಯೋಗ ಒತ್ತಾಯಿಸಿದೆ.
ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಕೇರಳಕ್ಕೆ ಆಗಮಿಸಿ ವಂದನಾ ಕುಟುಂಬದೊಂದಿಗೆ ನೇರವಾಗಿ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ತನಿಖೆ ತೃಪ್ತಿಕರವಾಗಿಲ್ಲ ಮತ್ತು ಈ ಬಗ್ಗೆ ಡಿಜಿಪಿಯನ್ನು ಭೇಟಿ ಮಾಡುವುದಾಗಿ ರೇಖಾ ಶರ್ಮಾ ತಿಳಿಸಿದ್ದಾರೆ.
ತನಿಖೆ ತೃಪ್ತಿ ತಂದಿಲ್ಲ ಎಂದು ಪಾಲಕರು ದೂರಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೋಷಕರ ದೂರಿನಲ್ಲಿ ಸತ್ಯಾಂಶ ಇರುವುದು ಅರಿವಾಯಿತು ಎಂದು ರೇಖಾ ಶರ್ಮಾ ಹೇಳಿದ್ದಾರೆ. ದಾಳಿ ನಡೆದ ತಕ್ಷಣ ವಂದನಾಗೆ ಚಿಕಿತ್ಸೆ ಸಿಗಲಿಲ್ಲ. ವಂದನಾಳನ್ನು ಕೆಲವೇ ಗಂಟೆಗಳಲ್ಲಿ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಿಂದ ತಿರುವನಂತಪುರಕ್ಕೆ ಕರೆತರಲಾಯಿತು ಎಂದು ರೇಖಾ ಶರ್ಮಾ ಗಮನ ಸೆಳೆದರು.
ಹಲ್ಲೆಕೋರನಿಂದ ವೈದ್ಯರನ್ನು ರಕ್ಷಿಸಲು ದೈಹಿಕವಾಗಿ ಸದೃಢರಾಗಿರುವ ಪೊಲೀಸರು ಆಸ್ಪತ್ರೆಯಲ್ಲಿ ಇರಲಿಲ್ಲ. ಪೊಲೀಸರ ದೈಹಿಕ ಸಾಮಥ್ರ್ಯದ ಬಗ್ಗೆ ಮಾತನಾಡಲು ರಾಜ್ಯದ ಡಿಜಿಪಿ ಅವರನ್ನು ಭೇಟಿ ಮಾಡುವುದಾಗಿಯೂ ರೇಖಾ ಶರ್ಮಾ ಮಾಹಿತಿ ನೀಡಿದ್ದಾರೆ. ವಂದನಾಳ ಪೋಷಕರು ಪರಿಹಾರ ಕೇಳಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಈ ಬಗ್ಗೆ ಬರುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.