HEALTH TIPS

ಪ್ರಾದೇಶಿಕ ಪಕ್ಷಗಳ ಅಪರಿಚಿತ ಆದಾಯ ಏರಿಕೆ

                    ವದೆಹಲಿ(PTI): ದೇಶದಲ್ಲಿರುವ ಪ್ರಾದೇಶಿಕ ಪಕ್ಷಗಳಿಗೆ ಅಪರಿಚಿತ ಮೂಲಗಳಿಂದ ಬಂದ ಆದಾಯವು 2021-22ರ ಆರ್ಥಿಕ ವರ್ಷದಲ್ಲಿ ₹887.55 ಕೋಟಿಗೆ ಏರಿಕೆಯಾಗಿದೆ. ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಶೇ 76ರಷ್ಟು ಪ್ರಮಾಣವು ಇಂಥ ಅಪರಿಚಿತ ಮೂಲಗಳಿಂದಲೇ ಬಂದವು ಎಂದು ಅಸೋಸಿಯೇಷನ್‌ ಆಫ್‌ ಡೆಮೊಕ್ರಟಿಕ್‌ ರಿಫಾರ್ಮ್‌ (ಎಡಿಆರ್‌) ವರದಿ ನೀಡಿದೆ.

              2020-21ರಲ್ಲಿ ಈ ಪ್ರಮಾಣವು ಶೇ 49.73ರಷ್ಟಿತ್ತು. ಅಂದರೆ, ಪ್ರಾದೇಶಿಕ ಪಕ್ಷಗಳಿಗೆ ಅಪರಿಚಿತ ಮೂಲಗಳಿಂದ ಬಂದ ಆದಾಯವು ₹263.93 ಕೋಟಿಯಷ್ಟಿತ್ತು.

                      20 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ನೀಡಿದವರ ವಿವರಗಳು ಲಭ್ಯವಿದೆ. ಈ ವಿವರಗಳನ್ನು ಪ್ರಾದೇಶಿಕ ಪಕ್ಷಗಳೇ ಚುನಾವಣಾ ಆಯೋಗಕ್ಕೆ ನೀಡಿರುತ್ತವೆ. ಅಪರಿಚಿತ ಮೂಲಗಳಿಂದ ಬಂದ ಆದಾಯದ ಲೆಕ್ಕವನ್ನು ಪಕ್ಷಗಳು ತಮ್ಮ ಆಡಿಟ್‌ ವರದಿಯಲ್ಲಿ ನೀಡಿರುತ್ತವೆ. ಆದರೆ, ಈ ವೇಳೆ ಆ ಆದಾಯದ ಮೂಲವನ್ನು ತಿಳಿಸಿರುವುದಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries