ಕೊಚ್ಚಿ: ತೆಂಗಿನ ಮರ ಹತ್ತುವಿಕೆ, ತೆಂಗು ರಕ್ಷಣೆ ಮತ್ತು ಕಟಾವು ಸೇರಿದಂತೆ ತೆಂಗು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಲು ತೆಂಗು ಅಭಿವೃದ್ಧಿ ಮಂಡಳಿಯು ತರಬೇತಿ ಪಡೆದ ತೆಂಗಿನಕಾಯಿ ಕಾರ್ಮಿಕರಿಗಾಗಿ (ಎಫ್‍ಒಸಿಟಿ) ಕಾಲ್ ಸೆಂಟರ್ ಸ್ಥಾಪಿಸಲು ಸಜ್ಜಾಗಿದೆ.
ಕಾಲ್ ಸೆಂಟರ್‍ಗೆ ಅಗತ್ಯವಿರುವ ಡೇಟಾಬೇಸ್ ನಿರ್ಮಿಸಲು, ಮಂಡಳಿಯು ಇಲ್ಲಿಯವರೆಗೆ ವಿವಿಧ ತೆಂಗು ಉತ್ಪಾದಕರ ಒಕ್ಕೂಟಗಳು/ಕಂಪನಿಗಳು/ಸಮಾಜಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ಭವನಗಳ ಮೂಲಕ ಆಯೋಜಿಸಿದ್ದ ತೆಂಗಿನ ಸ್ನೇಹ ಬಳಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮತ್ತು ತೆಂಗಿನಮರವೇರುವುದು ವೃತ್ತಿಯಾಗಿ ಅಳವಡಿಸಿಕೊಂಡ ಇತರರೂ ಈ ತಂಡದಲ್ಲಿರಲಿದ್ದಾರೆ. ಅವರ ಸೇವೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಳಸಿಕೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ.
ತೆಂಗಿನ ಮರವೇರುವ ಆಸಕ್ತರು, ನಿಪುಣರು ಮಾಹಿತಿಗಾಗಿ cdbpub@gmail.com ಅಥವಾ ದೂರವಾಣಿ ಸಂಖ್ಯೆ 0484 2376265 (ವಿಸ್ತರಣೆ: 137)/8848061240 ಅನ್ನು ಸಂಪರ್ಕಿಸಬಹುದು.