ಕಾಸರಗೋಡು: ಬೀಡಿ ವರ್ಕರ್ಸ್ ಯೂನಿಯನ್ (ಸಿಐಟಿಯು) ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಛೇರಿ ಎದುರು ಮೆರವಣಿಗೆ ಮತ್ತು ಪ್ರತಿಭಟನಾ ಧರಣಿ ನಡೆಯಿತು.
ಬೀಡಿ ಉದ್ಯಮವನ್ನು ಬುಡಮೇಲುಗೊಳಿಸುತ್ತಿರುವ ನಕಲಿ ಬೀಡಿ ತಯಾರಿಕೆ ಮತ್ತು ಮಾರಾಟ ತಡೆಯಬೇಕು, ತೆರಿಗೆ ವಂಚನೆ ನಡೆಸಿ ಬೀಡಿ ಮಾರಾಟ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮೆರವಣಿಗೆ ಹಾಗೂ ಧರಣಿ ನಡೆಸಲಾಯಿತು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಆರಂಭವಾದ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಬೀಡಿ ಕಾರ್ಮಿಕರು ಪಾಲ್ಗೊಂಡಿದ್ದರು. ನಂತರ ತಾಲೂಕು ಕಚೇರಿ ಎದುರು ನಡೆದ ಧರಣಿಯನ್ನು ಸಿಐಟಿಯು ಪ್ರಾದೇಶಿಕ ಕಾರ್ಯದರ್ಶಿ ಪಿ. ವಿ ಕುಞಂಬು ಉದ್ಘಾಟಿಸಿದರು. ಬೀಡಿ ಕಾರ್ಮಿಕರ ಫೆಡರೇಶನ್ ರಾಜ್ಯ ಸಮಿತಿ ಸದಸ್ಯೆ ಎಂ.ಸರೋಜಿನಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಭಾಸ್ಕರನ್, ವಿ.ಸುರೇಂದ್ರನ್, ಕೆ.ವಿ.ಗೋಪಿ, ವಿ.ಕುಞÂಕಣ್ಣನ್, ಜಯಂತಿ, ಕನಕಮಣಿ ಉಪಸ್ಥಿತರಿದ್ದರು. ಬೀಡಿ ಕಾರ್ಮಿಕರ ಸಂಘ (ಸಿಐಟಿಯು) ಕಾಸರಗೋಡು ತಾಲೂಕು ಕಾರ್ಯದರ್ಶಿ ಎ. ನಾರಾಯಣ ಸ್ವಾಗತಿಸಿದರು.