ಇಂದೋರ್: ಹಿಂದೂ ಯುವಕನ ಜೊತೆ ಮುಸ್ಲಿಂ ಹುಡುಗಿಯೊಬ್ಬಳು ರಾತ್ರಿ ಊಟಕ್ಕೆ ಹೋಗಿ ವಾಪಾಸ್ ಬರುವಾಗ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಇಂದೋರ್: ಹಿಂದೂ ಯುವಕನ ಜೊತೆ ಮುಸ್ಲಿಂ ಹುಡುಗಿಯೊಬ್ಬಳು ರಾತ್ರಿ ಊಟಕ್ಕೆ ಹೋಗಿ ವಾಪಾಸ್ ಬರುವಾಗ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಮುಸ್ಲಿಂ ಹುಡುಗಿ ಹಾಗೂ ಆಕೆಯ ಸ್ನೇಹಿತ ಗುರುವಾರ ರಾತ್ರಿ ರೆಸ್ಟೋರೆಂಟ್ನಲ್ಲಿ ಊಟ ಮಾಡಿ ಹೊರಬರುವ ವೇಳೆ ಯುವಕರ ಗುಂಪೊಂದು ಅವರನ್ನು ಹಿಂಬಾಲಿಸಿ ರಸ್ತೆಯ ಮಧ್ಯೆ ತಡೆದಿದೆ.
ಆಗ ಹುಡುಗಿಯು, ತಾನು ಊಟಕ್ಕೆ ಹೋಗಲು ತನ್ನ ಮನೆಯಲ್ಲಿ ಪೋಷಕರ ಅನುಮತಿ ಇದೆ ಎಂದು ಹೇಳಿದ್ದು, ಹೀಗೆ ಮಾತಿಗೆ ಮಾತು ಬೆಳೆದು ಹಿಂದೂ ಯುವಕನಿಗೆ ಥಳಿಸಲು ಯುವಕರ ಗುಂಪು ಮುಂದಾಗಿದೆ. ಈ ವೇಳೆ ದಾರಿಹೋಕರು ಆತನನ್ನು ಬಿಡಿಸಲು ಮುಂದಾದಾಗ ಯುವಕರ ಗುಂಪಿನಲ್ಲಿನ ಓರ್ವ ವ್ಯಕ್ತಿಯು ದಾರಿಹೋಕರಿಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ.
ಇನ್ನು, ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.