ತಿರುವನಂತಪುರಂ: ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಯಿಂದಾಗಿ ಲುಲು ಮಾಲ್‍ನ ಥಿಯೇಟರ್‍ಗಳು ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಿವೆ.
ಲುಲು ಮಾಲ್‍ನಲ್ಲಿ ತೀವ್ರ ವಿರೋಧ ಹಾಗೂ ಥಿಯೇಟರ್‍ಗಳ ಹಿನ್ನಲೆ ಬದಲಾವಣೆಯ ನಡುವೆಯೂ ಸಣ್ಣ ಥಿಯೇಟರ್ ಮಾಲೀಕರು ಕೂಡ ಚಿತ್ರ ಪ್ರದರ್ಶನಕ್ಕೆ ಸಿದ್ಧರಾಗಿದ್ದರು. ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿರುವ ಪಿವಿಆರ್ ಲುಲು ಥಿಯೇಟರ್‍ಗಳು ಬುಕ್ಕಿಂಗ್ ಆರಂಭಿಸಿದ ನಂತರ ಹಿಂತೆಗೆದುಕೊಂಡಿವೆ.
ಇಂದು ದೇಶದಲ್ಲಿ ಬಿಡುಗಡೆಯಾಗಲಿರುವ ಚಿತ್ರ ಕೇರಳದ ಮೊದಲ ವಾರದಲ್ಲಿ 21 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಘೋಷಿಸಲಾಗಿತ್ತು. .ಬಹುತೇಕ ಥಿಯೇಟರ್ ಗಳಲ್ಲಿ ಸೀಟ್ ಬುಕ್ಕಿಂಗ್ ಮುಕ್ತಾಯವಾಗುತ್ತಿದೆ. ಕೆಲವು ಚಿತ್ರಮಂದಿರಗಳು ಹೌಸ್ ಫುಲ್ ಆದ ನಂತರ ಟಿಕೆಟ್ ಬುಕ್ಕಿಂಗ್ ಸ್ಥಗಿತಗೊಂಡಿದೆ. ಈ ಹಿಂದೆ, ಚಿತ್ರ ಪ್ರದರ್ಶನ ಮತ್ತು ಬಿಡುಗಡೆಯನ್ನು ನಿμÉೀಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.