ನವದೆಹಲಿ: ಸಲಿಂಗ ವಿವಾಹದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಗೆ ಎಲ್‌ಜಿಬಿಟಿಕ್ಯೂ ಸಮುದಾಯದ ಹಕ್ಕುಗಳ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಸಲಿಂಗ ವಿವಾಹದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಗೆ ಎಲ್‌ಜಿಬಿಟಿಕ್ಯೂ ಸಮುದಾಯದ ಹಕ್ಕುಗಳ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
'ಇದು ಅಪಾಯಕಾರಿ ಹಾಗೂ ಸಮಾಜದ ದಾರಿ ತಪ್ಪಿಸುವಂತಹ ನಡೆ.
'ಸಲಿಂಗ ಕಾಮವು ಒಂದು ವ್ಯಾಧಿ. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಲಭಿಸಿದರೆ ಸಮಾಜದಲ್ಲಿ ಈ ರೋಗ ಇನ್ನಷ್ಟು ಉಲ್ಬಣಿಸುತ್ತದೆ' ಎಂದು ಸಮೀಕ್ಷೆಯಲ್ಲಿ ಭಾಗಿಯಾದ ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದ ವೃತ್ತಿಪರರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಂವರ್ಧಿನಿ ನ್ಯಾಸ್ ಹೇಳಿತ್ತು.
'ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಈ ವೈದ್ಯರು ಯಾರು? ಇವರಿಗೆ ನೀಡಲಾಗಿರುವ ಪರವಾನಗಿಯನ್ನು ರದ್ದುಪಡಿಸಬೇಕು' ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
'ಸಂವರ್ಧಿನಿ ನ್ಯಾಸ್ ಸಂಸ್ಥೆ ನಡೆಸಿರುವ ಸಮೀಕ್ಷೆಯು ಅಮಾನವೀಯ ಹಾಗೂ ಅವೈಜ್ಞಾನಿಕವಾದುದು. ಜೊತೆಗೆ ಮೂರ್ಖತನದಿಂದ ಕೂಡಿದೆ' ಎಂದು ಹೋರಾಟಗಾರ್ತಿ ಹಾಗೂ ಸಿಪಿಎಂ ನಾಯಕಿ ಸುಭಾಷಿನಿ ಅಲಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
'ದೇಶದ ವಿವಿಧೆಡೆ ಇರುವ ವೈದ್ಯಕೀಯ ಕ್ಷೇತ್ರದ ಒಟ್ಟು 318 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು' ಎಂದು ರಾಷ್ಟ್ರೀಯ ಸೇವಿಕಾ ಸಮಿತಿಯ ಹಿರಿಯ ನಾಯಕಿ ಸ್ಪಷ್ಟನೆ ನೀಡಿದ್ದಾರೆ.