ನವದೆಹಲಿ: ಕಂಪನಿಯ ಭಾರತೀಯ ಕಾರ್ಯಾಚರಣೆಗಳಲ್ಲಿ ರಾಜಕೀಯ ತಾರತಮ್ಯವನ್ನು ನಿವಾರಿಸಲು ತಾನು ವಿಫಲಗೊಂಡಿದ್ದೇನೆ ಎಂಬ ಆರೋಪಗಳ ಕುರಿತು ವಿಚಾರಣೆಯ ವಿರುದ್ಧ ಮತ ಚಲಾಯಿಸುವಂತೆ ಫೇಸ್ಬುಕ್ ನ ಮಾತೃಸಂಸ್ಥೆ ಮೆಟಾದ ನಿರ್ದೇಶಕರ ಮಂಡಳಿಯು ತನ್ನ ಶೇರುದಾರರಿಗೆ ಶಿಫಾರಸು ಮಾಡಿದೆ.
ನವದೆಹಲಿ: ಕಂಪನಿಯ ಭಾರತೀಯ ಕಾರ್ಯಾಚರಣೆಗಳಲ್ಲಿ ರಾಜಕೀಯ ತಾರತಮ್ಯವನ್ನು ನಿವಾರಿಸಲು ತಾನು ವಿಫಲಗೊಂಡಿದ್ದೇನೆ ಎಂಬ ಆರೋಪಗಳ ಕುರಿತು ವಿಚಾರಣೆಯ ವಿರುದ್ಧ ಮತ ಚಲಾಯಿಸುವಂತೆ ಫೇಸ್ಬುಕ್ ನ ಮಾತೃಸಂಸ್ಥೆ ಮೆಟಾದ ನಿರ್ದೇಶಕರ ಮಂಡಳಿಯು ತನ್ನ ಶೇರುದಾರರಿಗೆ ಶಿಫಾರಸು ಮಾಡಿದೆ.
ಬಳಕೆದಾರ ಗುಂಪು 'ಎಕೋ' ಈ ವಿಚಾರಣೆಯನ್ನು ಪ್ರಸ್ತಾವಿಸಿದ್ದು, ಮೇ 31ರಂದು ನಡೆಯಲಿರುವ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮೆಟಾ ಶೇರುದಾರರು ಈ ಬಗ್ಗೆ ಮತಗಳನ್ನು ಚಲಾಯಿಸಲಿದ್ದಾರೆ.
ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸ್‌ಆಯಪ್ ಸೇರಿದಂತೆ ಮೆಟಾದ ಪ್ಲ್ಯಾಟ್ಫಾರ್ಮ್ ಗಳ ಬಳಕೆದಾರರಲ್ಲಿ ಅದರ ವಿರುದ್ಧದ ಆರೋಪಗಳ ಕುರಿತು ಜಾಗ್ರತಿಯನ್ನು ಹೆಚ್ಚಿಸಲು ಮತ್ತು ತನ್ನ ಪ್ರಸ್ತಾವದ ಪರವಾಗಿ ಮತ ಚಲಾಯಿಸುವಂತೆ ಮೆಟಾ ಶೇರುದಾರರನ್ನು ಆಗ್ರಹಿಸಲು ಎಕೋ ಅಭಿಯಾನವೊಂದನ್ನು ಆರಂಭಿಸಿದೆ. ಇಂಡಿಯಾ ಸಿವಿಲ್ ವಾಚ್ ಇಂಟರ್ನ್ಯಾಷನಲ್ (ಐಸಿಡಬ್ಲ್ಯುಐ) ಮತ್ತು ಇಂಟರ್ನೆಟ್ ಫ್ರೀಡಂ ಫೌಂಡೇಷನ್ (ಐಎಫ್‌ಎಫ್) ಈ ಅಭಿಯಾನದಲ್ಲಿ ಕೈಜೋಡಿಸಿವೆ. ಎಕೋದ ಪ್ರಸ್ತಾವವನ್ನು ಅಧಿಕೃತವಾಗಿ 'ಪ್ರಸ್ತಾವ 7' ಎಂದು ಹೆಸರಿಸಲಾಗಿದೆ.
ದ್ವೇಷ ಭಾಷಣಗಳ ಪ್ರಸಾರ,ಅಪಾಯಗಳು ಮತ್ತು ರಾಜಕೀಯ ಪಕ್ಷಪಾತವನ್ನು ಬಗೆಹರಿಸುವಲ್ಲಿ ವೈಫಲ್ಯ, ಸಮರ್ಪಕ ಕಂಟೆಂಟ್ ನಿಯಂತ್ರಣ ಮತ್ತು ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯ ಕೊರತೆಗಾಗಿ ಫೇಸ್ಬುಕ್ ವಿರುದ್ಧ ಆರೋಪಗಳನ್ನು ಪ್ರಸ್ತಾವ 7 ಎತ್ತಿ ತೋರಿಸಿದೆ ಎಂದು ಐಎಫ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಬಿಜೆಪಿ ರಾಜಕಾರಣಿಗಳು ಮತ್ತು ಹಿಂದು ರಾಷ್ಟ್ರವಾದಿ ಘಟಕಗಳು ಮಾಡಿದ್ದ ಪೋಸ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತದಲ್ಲಿಯ ಹಿರಿಯ ಫೇಸ್ಬುಕ್ ಅಧಿಕಾರಿ ನಿರಾಕರಿಸಿದ್ದಾರೆ. ಹಾಗೆ ಮಾಡುವುದರಿಂದ ಆಡಳಿತಾರೂಢ ಪಕ್ಷದೊಂದಿಗೆ ತನ್ನ ಕಂಪನಿಯ ಸಂಬಂಧ ಹಾಳಾಗುತ್ತದೆ ಎಂದು ಅವರು ಆತಂಕಗೊಂಡಿದ್ದಾರೆ ಎಂಬ ವರದಿಗಳಿಗೆ ಈ ಆರೋಪಗಳು ಸಂಬಂಧಿಸಿವೆ.
ತನ್ನ ಭಾರತೀಯ ಕಾರ್ಯಾಚರಣೆಗಳ ಕುರಿತು ಮೆಟಾ ಬಿಡುಗಡೆಗೊಳಿಸಿರುವ ಮಾನವ ಹಕ್ಕುಗಳ ಪ್ರಭಾವ ವರದಿಯು ಪಾರದರ್ಶಕವಾಗಿಲ್ಲ ಎಂದೂ ಎಕೋ ಟೀಕಿಸಿದೆ.