ನವದೆಹಲಿ: ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನಯಡಿ ನಿರ್ವಣವಾಗಿರುವ ಸಂಸತ್ತಿನ ಹೊಸ ಕಟ್ಟಡ ಈ ತಿಂಗಳ ಕೊನೆಯಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ. ನರೇಂದ್ರ ಮೋದಿ 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನವಾದ ಮೇ 26 ಲೋಕಾರ್ಪಣೆಗಾಗಿ ಸಂಭಾವ್ಯ ದಿನ ಎನ್ನಲಾಗಿದೆ.
ಹೊಸ ಭವನದಲ್ಲೇ ಮುಂಗಾರು ಅಧಿವೇಶನ: ಜುಲೈನಲ್ಲಿ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನವನ್ನು ಹೊಸ ಭವನದಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದ ಕೊನೆಯಲ್ಲಿ ನಡೆಯಬೇಕಿರುವ ಜಿ-20 ದೇಶಗಳ ಸ್ಪೀಕರ್ಗಳ ಸಭೆಯನ್ನು ಹೊಸ ಕಟ್ಟಡದಲ್ಲಿ ಆಯೋಜಿಸುವ ಸಂಭವವಿದೆ.
2021ರ ಜನವರಿಯಲ್ಲಿ ತ್ರಿಕೋನಾಕೃತಿಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿತ್ತು. 75ನೇ ಸ್ವಾತಂತ್ರೊಯೕತ್ಸವದ ಹೊತ್ತಿಗೆ ಅಂದರೆ 2022ರ ಆಗಸ್ಟ್ನಲ್ಲಿ ಮುಗಿಸುವ ಯೋಜನೆಯಿತ್ತು. ಆದರೆ, 9 ತಿಂಗಳು ವಿಳಂಬವಾಗಿದೆ.
ಹೊಸ ಸಂಸತ್ ಭವನಕ್ಕೆ ಮೂರು ಮುಖ್ಯ ದ್ವಾರಗಳಿದ್ದು ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಸಲಾಗಿದೆ. ಸಂಸದರು, ವಿಐಪಿಗಳು ಮತ್ತು ಸಂದರ್ಶಕರಿಗಾಗಿ ಪ್ರತ್ಯೇಕ ಪ್ರವೇಶ ದ್ವಾರಗಳಿರುತ್ತವೆ. 64,500 ಚದರ ಅಡಿ ವಿಸ್ತೀರ್ಣದಲ್ಲಿ ನಾಲ್ಕಂತಸ್ತಿನ ಕಟ್ಟಡವನ್ನು ನಿರ್ವಿುಸಲಾಗಿದೆ. 1,224 ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸಬಹುದು. ಅಂದಾಜು 970 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಭವನ ನಿರ್ವಣವಾಗಿದೆ. ಟಾಟಾ ಪ್ರಾಜೆಕ್ಟ್ಸ್ ನಿರ್ವಣದ ಗುತ್ತಿಗೆ ಪಡೆದಿತ್ತು.