ಕಾಸರಗೋಡು: ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೇಮಕಗೊಂಡ ತಾಲೂಕು ಮಟ್ಟದ IಖS ಅಧಿಕಾರಿಗಳಿಗೆ, ವಿಪತ್ತುಗಳ ಸಮಯದಲ್ಲಿ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಐಆರ್‍ಎಸ್(ಇನ್ಸಿಡೆಂಟ್ ರೆಸ್ಪೋನ್ಸ್ ಸಿಸ್ಟಂ) ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಲು ಆನ್‍ಲೈನ್ ತರಬೇತಿ ಆಯೋಜಿಸಲಗುತ್ತಿದೆ.
ಕಾಸರಗೋಡು, ಕಣ್ಣೂರು ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ತಾಲೂಕು ಮಟ್ಟದ ಐಆರ್‍ಎಸ್ ಅಧಿಕಾರಿಗಳಿಗೆ ಮೇ 29 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆನ್‍ಲೈನ್ ತರಬೇತಿ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (04998 244044)ಸಂಪರ್ಕಿಸುವಮತೆ ಪ್ರಕಟಣೆ ತಿಳಿಸಿದೆ.