ಶಿಲ್ಲಾಂಗ್: ಮೇಘಾಲಯದಲ್ಲಿ ಇಬ್ಬರು ಶಾಸಕರನ್ನು ಹೊಂದಿರುವ ಪಿಡಿಎಫ್ ಪಕ್ಷ ಆಡಳಿತಾರೂಢ ಎನ್‌ಪಿಪಿ ಪಕ್ಷದೊಂದಿಗೆ ವಿಲೀನವಾಗಿದೆ.
ಮೇಘಾಲಯ: ಸಂಗ್ಮಾ ನೇತೃತ್ವದ ಎನ್‌ಪಿಪಿ ಪಕ್ಷದೊಂದಿಗೆ ಪಿಡಿಎಫ್ ವಿಲೀನ
0
ಮೇ 07, 2023
Tags
ಶಿಲ್ಲಾಂಗ್: ಮೇಘಾಲಯದಲ್ಲಿ ಇಬ್ಬರು ಶಾಸಕರನ್ನು ಹೊಂದಿರುವ ಪಿಡಿಎಫ್ ಪಕ್ಷ ಆಡಳಿತಾರೂಢ ಎನ್‌ಪಿಪಿ ಪಕ್ಷದೊಂದಿಗೆ ವಿಲೀನವಾಗಿದೆ.
ಎನ್‌ಪಿಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರ ಸಮ್ಮುಖದಲ್ಲಿ ಪಿಡಿಎಫ್‌ನ ಇಬ್ಬರು ಶಾಸಕರು ಹಾಗೂ ನೂರಾರು ಕಾರ್ಯಕರ್ತರು ಶನಿವಾರ ಸಂಜೆ ಎನ್‌ಪಿಪಿ ಸೇರಿದರು.
ಮೇ 10ರಂದು ನಡೆಯಲಿರುವ ಸೊಹಿಯಾಂಗ್ ವಿಧಾನಸಭಾ ಉಪಚುನಾವಣೆಗೂ ಮುನ್ನವೇ ಈ ವಿಲೀನ ನಡೆದಿದೆ.
ಅಸ್ಸಾಂ ರಾಜ್ಯದೊಂದಿಗಿನ ಗಡಿ ಸಮಸ್ಯೆ ಬಗೆಹರಿಸುವುದು ಹಾಗೂ ಖಾಸಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದಾಗಿ ಕಾನ್ರಾಡ್ ಕೆ. ಸಂಗ್ಮಾ ಭರವಸೆ ನೀಡಿರುವುದರಿಂದ ಪಿಡಿಎಫ್ ಪಕ್ಷವನ್ನು ಎನ್‌ಪಿಪಿಯೊಂದಿಗೆ ವಿಲೀನ ಮಾಡಲಾಗಿದೆ ಎಂದು ಪಿಡಿಎಫ್ ಪಕ್ಷದ ವಕ್ತಾರರು ಹೇಳಿದ್ದಾರೆ.