ಕುಂಬಳೆ ಪೀರ್ಕಾ ಬಂಟರ ಸಂಘದ ಮಹಾಸಭೆ ಕುಂಬಳೆ ಪೀರ್ಕಾ ಕಚೇರಿ ಬದಿಯಡ್ಕ ದಲ್ಲಿ ಜರಗಿತು.
ಕುಂಬಳೆ ಪಿರ್ಕಾದ ಅಧ್ಯಕ್ಷ ವಳಮಲೆ ಪದ್ಮನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಜಿಲ್ಲಾ ಸಮಿತಿ ಸದಸ್ಯ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಬಿ.ಎಸ್. ಗಾಂಭೀರ್ ಶುಭ ಹಾರೈಸಿದರು.
ವಾರ್ಷಿಕ ವರದಿ ಲೆಕ್ಕಪತ್ರ ಮಂಡನೆ ಜರಗಿತು. ವಿವಿಧ ಪಂಚಾಯತಿ ಬಂಟರ ಸಂಘದ ಅಧ್ಯಕ್ಷ ಮನಮೋಹನ್ ರೈ ಪಿಂಡಗ, ನಿರಂಜನ ರೈ ಪೆರಡಾಲ, ಸಂತೋಷ್ ಕುಮಾರ್ ಶೆಟ್ಟಿ, ನಾರಾಯಣ ಆಳ್ವ ಎಣ್ಮಕಜೆ, ಸದಸ್ಯರು ಭಾಗವಹಿಸಿದ್ದರು. ಮುಂದಿನ ಮೂರು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ವಳಮಲೆ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ರೈ ಕೊರೆಕ್ಕಾನ, ಕೋಶಾಧಿಕಾರಿ ಹರಿಪ್ರಸಾದ್ ರೈ ಮಾಯಿಲೆಂಗಿ ಆಯ್ಕೆಯಾದರು.
ಕಾರ್ಯದರ್ಶಿ ಅಶೋಕ್ ರೈ ಸ್ವಾಗತಿಸಿ, ಕೋಶಾಧಿಕಾರಿ ಹರಿಪ್ರಸಾದ್ ರೈ ವಂದಿಸಿದರು.