ಕಾಸರಗೋಡು:ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಕಾಞಂಗಾಡ್‍ನ ಅಲಮಿಂಪಲ್ಲಿಯಲ್ಲಿ ನಡೆಯುತ್ತಿರುವ 'ನನ್ನ ಕೇರಳ' ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದಲ್ಲಿ ಕಾಞಂಗಾಡ್ ಅಗ್ನಿಶಾಮಕ ಘಟಕವು ನಿರ್ಮಿಸಿರುವ ಸಾಹಸಮಯ 'ಬರ್ಮಾ' ಸೇತುವೆ ಜನಾಕರ್ಷಣೆಗೆ ಕಾರಣವಾಯಿತು.
ಹಗ್ಗಗಳು, ಕರ್ನಮೆಂಟಲ್ ರೋಪ್ ಇತ್ಯಾದಿಗಳನ್ನು ಬಳಸಿ ಮುಖ್ಯ ವೇದಿಕೆ ವಠಾರದಲ್ಲಿ ಅಗ್ನಿಶಾಮಕ ದಳದವರು ಈ 'ಸೇತುವೆ' ನಿರ್ಮಿಸಿದ್ದಾರೆ. ಹಿರಿಯರು ಹಾಗೂ ಮಕ್ಕಳಿಗೆ ಈ ಹಗ್ಗದ ಸೇತುವೆ ಮೂಲಕ ಸಲೀಸಾಗಿ ಸಂಚರಿಸಬಹುದಾಗಿದ್ದು, ಪ್ರದರ್ಶನಮೇಳಕ್ಕೆ ಆಗಮಿಸುವವರಿಗೆ ಸಾಹಸ ಪ್ರದರ್ಶನಕ್ಕೂ ವೇದಿಕೆಯಘುತ್ತಿದೆ. ಇದು ವಿಪತ್ತಿನ ಸಂದರ್ಭ ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ನಿರ್ವಹಣಾ ತಂಡದವರು ನಿರ್ಮಿಸುವ ತಾತ್ಕಾಲಿಕ ಸೇತುವೆಯಾಗಿದೆ. ಹಿರಿಯರು, ಕಿರಿಯರೆನ್ನದೆ ಸಾಹಸ ಪ್ರದರ್ಶನಕ್ಕಾಗಿ ಹಲವರು ಮಂದಿ ಬರ್ಮಾ ಸೇತುವೆಗೆ ಭೇಟಿ ನೀಡುತ್ತಿದ್ದಾರೆ.
ಕಾಞಂಗಾಡ್ ಅಗ್ನಿಶಾಮಕ ದಳದ ಠಾಣಾಧಿಕಾರಿ ಪಿ.ವಿ.ಪವಿತ್ರನ್, ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿಗಳಾದ ವರುಣ್ ಗೋಪಿ, ಉಮೇಶನ್, ಶಿಜು, ಆನಂದು, ಅರುಣ್ ಕುಮಾರ್, ಅರುಣ್, ಕಿರಣ್, ಪ್ರದೀಪನ್ ಮತ್ತು ಸುಜಿತ್ ಮುಂತಾದವರು ಸಿವಿಲ್ ಡಿಫೆನ್ಸ್‍ಬರ್ಮಾ ಸೇತುವೆ ನಿರ್ಮಾಣದ ರೂವಾರಿಗಳಾಗಿದ್ದಾರೆ. ಎರಡು ತಾಸಿನ ಒಳಗೆ ಈ ಸೇತುವೆಯನ್ನು ನಿರ್ಮಿಸುತ್ತಿದ್ದಾರೆ.