ಕಾಸರಗೋಡು: ಕಳೆದ ಎರಡು ವರ್ಷಗಳ ಕಾಲಾವಧಿಯಲ್ಲಿ ಕೇರಳ ಸ್ಟೆಟ್ ಫಿನಾನ್ಶಿಯಲ್ ಎಂಟರ್‍ಪ್ರೈಸಸ್(ಕೆಎಸ್‍ಎಫ್‍ಇ)ಗೆ ಕೆಪಿಎಸ್‍ಸಿ ಮೂಲಕ 1300 ಮಂದಿಯನ್ನು ನೇಮಕಾತಿ ನಡೆಸಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ.
ಅವರು ಕೇರಳ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕೆಎಸ್‍ಎಫ್‍ಇಯ ನೂತನ ಯೋಜನೆ ಮೈಕ್ರೋ ಹಣಕಾಸು ಸಂಸ್ಥೆಯ ಜಿಲ್ಲೆಯಲ್ಲಿನ ಮೊದಲ ಶಾಖೆಯನ್ನು ಬಂದಡ್ಕದಲ್ಲಿ ಉದ್ಘಾಟಿಸಿ ಮಾತನಾಡಿದರು. ಪಾರದರ್ಶಕ, ಸುಸ್ಥಿರ ಮತ್ತು ಲಾಭದಾಯಕ ಹಣಕಾಸು ಸೇವೆಗಳನ್ನು ಒದಗಿಸುವಲ್ಲಿ ಕೆಎಸ್‍ಎಫ್‍ಇ ರಾಜ್ಯದ್ಯಂತ ಮಹತ್ವದ ಹೆಜ್ಜೆಗುರುತನ್ನು ದಾಖಲಿಸಿಕೊಂಡಿದೆ. ಕೆಎಸ್‍ಎಫ್‍ಇ ಸಾರ್ವಜನಿಕ ನಂಬಿಕೆಯಿಂದ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಉದ್ಯೋಗಿಗಳಿಗೆ ಅತ್ಯುತ್ತಮ ಸೇವೆ ನಿಡಲು ಸಾಧ್ಯವಾಗಿದ್ದು, ಕಡಿಮೆ ಬಡ್ಡಿದರದಲ್ಲಿ ಚಿನ್ನದ ಅಡಮಾನ ಸಾಲ ಸೇರಿದಂತೆ ವಿವಿಧ ರೀತಿಯ ಸಾಲ ಮತ್ತು ಚಿಟ್ ಸೇವೆಗಳು ಶಾಖೆಯ ಮೂಲಕ ಲಭ್ಯವಿರುವುದಗಿ ತಿಲಿಸಿದರು.
ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಕುಟ್ಟಿಕೋಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳಿ ಪಯ್ಯಮಗನ, ಸ್ಥಾಯಿ ಸಮಿತಿ ಅಧ್ಯಕ್ಷ ವಿ. ಅರವಿಂದನ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಮೀರ್ ಕುಂಬಕೋಡ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಅನಂತ, ಸಾಬು ಅಬ್ರಹಾಂ, ವಿವೇಕ್ ಪಲಾರಿ, ಉಮರ್ ಬಾವಾ, ಎಂ.ಪಿ.ಶ್ರೀಜಿತ್, ಕೆ.ಕೆ.ಕುಞು ಕೃಷ್ಣನ್, ಚಕ್ರಪಾಣಿ, ಕೆಎಸ್ ಎಫ್ ಇ ಸಂಸ್ಥೆಗಳ ಪ್ರತಿನಿಧಿಗಳಾದ ವಿ.ಎಂ.ರೋಜಾ ರಮಣಿ, ಇ.ರಾಜನ್, ಪಿ.ಟಿ. ಸತೀಶ್ ಬಾಬು, ಕೆ.ಶಿಕುಮಾರ್ ಉಪಸ್ಥಿತರಿದ್ದರು. ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಕೆ ಸನಿಲ್ ಸ್ವಾಗತಿಸಿದರು. ಕನ್ಣೂರು ಎಜಿಎಂ ಕೆ.ಟಿ ಚಂದ್ರಶೇಖರನ್ ವಂದಿಸಿದರು.