ಬೆಂಗಳೂರು: ವಿ.ಕೆ.ಎಂ. ಕಲಾವಿದರು ಬೆಂಗಳೂರು ಸಂಸ್ಥೆಯ 42 ನೇ ವಾರ್ಷಿಕದಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕಾಸರಗೋಡಿನ ಪ್ರತಿಭೆಗಳಿಂದ ಕಾಸರಗೋಡು ಸಾಂಸ್ಕøತಿಕ ಮೇಳ ನಡೆಯಿತು.
ಕಾಸರಗೋಡಿನ ಪ್ರತಿಭಾವಂತ ಕಲಾವಿದರಾದ ತೃಷಾ ಜಿ.ಕೆ, ಕೃಪಾನಿಧಿ ಇವರಿಂದ ಯಕ್ಷ ನೃತ್ಯ, ವಿದುಷಿ ಕಾವ್ಯ ಭಟ್ ಪೆರ್ಲ ಬಳಗದಿಂದ ಜಾನಪದ ನೃತ್ಯ ಹಾಗು ಶಾಸ್ತ್ರೀಯ ನೃತ್ಯ, ಕಿರಣ್ ಕಲಾಂಜಲಿ ಅವರಿಂದ ‘ಸತ್ಯ ದರ್ಶನ’ ಎನ್ನುವ ಏಕ ವ್ಯಕ್ತಿ ನಾಟಕ ನಡೆಯಿತು. ಇದೇ ಸಂದರ್ಭದಲ್ಲಿ ಕಿರಣ್ ಕಲಾಂಜಲಿ ಮತ್ತು ಕಾವ್ಯ ಭಟ್ ಪೆರ್ಲ ಅವರನ್ನು ರಂಗ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿ.ಕೆ.ಎಂ.ಕಲಾವಿದರು ಸಂಸ್ಥೆಯ ಕಾರ್ಯದರ್ಶಿ ಸಿ.ಎಂ.ತಿಮ್ಮಯ್ಯ, ನಾಟಕ ನಿರ್ದೇಶಕರಾದ ನಾದಪ್ರಿಯ ಗಂಗಪ್ಪ, ಕಿರುತೆರೆ ನಟ ನಾಗೇಂದ್ರ ಪ್ರಸಾದ್, ನಟ, ನಿರ್ದೇಶಕ ಶಿವಶಂಕರ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ರತ್ನ ನಾಗೇಶ್, ರಂಗಭೂಮಿ ಕಲಾವಿದೆ ಲಕ್ಷ್ಮೀ ಭಟ್, ರಂಗಭೂಮಿ ಕಲಾವಿದ ಮುನಿಸ್ವಾಮಿ, ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು, ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.