ಮಲಪ್ಪುರಂ: ಮಲಪ್ಪುರಂನಲ್ಲಿ ವಂದೇಭಾರತ್ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿದೆ. ರೈಲಿನ ಕಿಟಕಿ ಒಡೆದಿದೆ. ಕಾಸರಗೋಡು - ತಿರುವನಂತಪುರಂ ಸೇವೆಯ ವೇಳೆ ತಿರೂರ್ ನಿಲ್ದಾಣದಿಂದ ಹೊರಟು ಅಲ್ಪ ಹೊತ್ತಲ್ಲಿ ಕಲ್ಲುತೂರಾಟ ನಡೆದಿದೆ.
ರೈಲು ನಿನ್ನೆ ಸಂಜೆ 5 ಗಂಟೆಗೆ ತಿರೂರ್ ನಿಲ್ದಾಣವನ್ನು ತಲುಪಿತು. ಸಂಜೆ 5.15ರ ಸುಮಾರಿಗೆ ಕಲ್ಲು ತೂರಾಟ ನಡೆದಿದೆ. ಶೋರ್ನೂರಿನಲ್ಲಿ ಪ್ರಾಥಮಿಕ ತಪಾಸಣೆ ನಡೆಸಲಾಯಿತು. ನಂತರ ಪ್ರಯಾಣ ಮುಂದುವರೆಯಿತು. ಘಟನೆ ಸಂಬಂಧ ರೈಲ್ವೇ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಪೆÇಲೀಸರಿಗೆ ಮಾಹಿತಿ ರವಾನಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ. ವಂದೇಭಾರತಕ್ಕೆ ಭದ್ರತೆ ಹೆಚ್ಚಿಸುವುದಾಗಿಯೂ ಘೋಷಿಸಲಾಗಿದೆ.
ಮಲಪ್ಪುರಂನಲ್ಲಿ ವಂದೇಭಾರತ್ ನಿಲ್ಲಿಸಲು ಅನುಮತಿ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಏತನ್ಮಧ್ಯೆ, ವಂದೇಭಾರತ್ ಎಕ್ಸ್‍ಪ್ರೆಸ್‍ನ ಮೊದಲ ಪ್ರಯಾಣದಲ್ಲಿ ಸಂಸದ ವಿಕೆ ಶ್ರೀಕಂಠನ್ ಅವರ ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ.