ಕೊಲ್ಲಂ: ಕೊಟ್ಟಾರಕ್ಕರದಲ್ಲಿ ಯುವ ವೈದ್ಯೆಯ ಸಾವಿನ ಘಟನೆಯಲ್ಲಿ ಭದ್ರತಾ ಲೋಪವನ್ನು ಮುಚ್ಚಿಹಾಕಲು ಆರೋಗ್ಯ ಸಚಿವೆ ವೀಣಾ ಜಾರ್ಜ್ ವಿಚಿತ್ರ ವಾದ ಮಂಡಿಸಿದ್ದಾರೆ.
ಕೊಲೆಯಾದ ಡಾ. ವಂದನಾಗೆ ದಾಳಿಗಳಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಇದ್ದಿರಲಿಲ್ಲ ಎಂದು ಸಚಿವರು ಹೇಳಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸೂಕ್ತ ಭದ್ರತೆಯಿದ್ದು, ದಾಳಿ ನಡೆದಾಗ ಯುವ ವೈದ್ಯೆ ಭಯಗೊಂಡಿದ್ದರೆಂದು ವೀಣಾ ಜಾರ್ಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
''ಕೊಟ್ಟಾರಕ್ಕರದಲ್ಲಿ ನಡೆದಿರುವುದು ದುರದೃಷ್ಟಕರ ಘಟನೆ. ಬಹಳ ನೋವಿನ ರೀತಿಯಲ್ಲಿ ಕೊಲ್ಲಲಾಯಿತು. ಪೊಲೀಸರು ಕರೆತಂದಿರುವ ಶಂಕಿತ ವ್ಯಕ್ತಿಯೂ ಹೌದು. ಸ್ಥಳದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಸಿಎಂಒ ಉಪಸ್ಥಿತರಿದ್ದರು. ವೈದ್ಯೆ ಹೌಸ್ ಸರ್ಜನ್. ಅμÉ್ಟೂಂದು ಅನುಭವವಿಲ್ಲ' ಎಂದು ಸಚಿವೆ ಹೇಳಿಕೆ ನೀಡಿದ್ದರು.
ವ್ಯೆದ್ಯೆ ದಾಳಿಯಿಂದ ಬೆದರಿ ಓಡಲಾಗದೆ ಕೆಳಗೆ ಬಿದ್ದಾಗ ದಾಳಿ ನಡೆದಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಗ್ಯ ಇಲಾಖೆ, ಪೋಲೀಸರು ಹಾಗೂ ಸರ್ಕಾರ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿವೆ. ಇದೇ ವೇಳೆ ಘಟನೆಗೆ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.
ಬಹುಷಃ ಸರ್ಕಾರಿ ಸೇವೆ ಅಥವಾ ವ್ಯದ್ಯಕೀಯ ವೃತ್ತಿಯಂತಹ ಸಾರ್ವಜನಿಕ ಸೇವೆಗಿಳಿಯುವ ಮುನ್ನ ರಾಜಕೀಯ ಪಕ್ಷಗಳ ಯುವ ತಂಡದಲ್ಲಿ ಸದಸ್ಯರಾಗಿ, ಪ್ರತಿಭಟನೆ, ಹೋರಾಟಗಳಲ್ಲಿ ಪೆಟ್ಟು ತಿಂದ ಕನಿಷ್ಠ ಅನುಭವಗಳಿರಬೇಕೆಂಬುದು ವೀಣಾ ಜಾರ್ಜ್ ಅವರಂತಹ ಅಪಕ್ವ ಸಚಿವರುಗಳ ವಾದ ಆಗಿರಬಹುದೇನೋ!!