ಬದಿಯಡ್ಕ: ಕುಂಟಿಕಾನ ಮಠ ಶ್ರಿಶಂಕರ ನಾರಾಯಣ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದೈವಸ್ವಂ ವಿಭಾಗದ ಅಧಿಕಾರಿ ರಮಾನಾಥ ಶೆಟ್ಟಿ ವಹಿಸಿದ್ದರು. ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಧಾರ್ಮಿಕ ಭಾಷಣ ಮಾಡಿದರು.
ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ವೈದ್ಯಾಧಿಕಾರಿ ನಾರಾಯಣ ನಾಯ್ಕ್ ಶುಭಹಾರೈಸಿದರು. ಕುಮಾರ್ ಕುಂಟಿಕಾನ ಮಠ ಸ್ವಾಗತಿಸಿ, ಶಾಮ್.ಭಟ್ ವಂದಿಸಿದರು. ರಾಜಾರಾಮ ಮಾಸ್ತರ್ ಕುಂಜಾರು ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.