ಕಾಸರಗೋಡು: ಮಂಜೇಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಯ ಕುಂಚತ್ತೂರು ಮಾಡ ದೇವಸ್ಥಾನದ ಬಳಿಯ ಮಾಡಾದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯ ಹಿನ್ನೆಲೆಯಲ್ಲಿ ಮೇ 6ರಿಂದ ಮೇ 8 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಘೋಷಿಸಿದ್ದಾರೆ. ಇಲ್ಲಿನ ಸ್ಮಶಾನ ಜಾಗ ಮತ್ತು ರಸ್ತೆ ವಿಚಾರದಲ್ಲಿ ಸಮಸ್ಯೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಈ ನಿಷೆಧಾಜ್ಞೆ ಹೇರಲಾಗಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯಿಂದ ಲಭಿಸಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಈ ನಿಷೇಧಾಜ್ಞೆ ಪ್ರಕಟಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಠಾರಿ, ಬಂದೂಕು ಸೇರಿದಂತೆ ಇತರ ಮಾರಕಾಯುಧ ವಶದಲ್ಲಿರಿಸಿಕೊಳ್ಳುವುದು, ಸಾಗಿಸುವುದು, ವ್ಯಕ್ತಿಗಳನ್ನು ಅವಮಾನಿಸುವುದು, ಘೋಷಣೆ, ಮೆರವಣಿಗೆ ನಡೆಸುವುದು, ಹಾಡುಗಳನ್ನು ಹಾಡುವುದು ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಸಾರ್ವಜನಿಕ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.