ಲಿವರ್ ನಮ್ಮ ದೇಹದ ಅತಿ ಮುಖ್ಯವಾದ ಅಂಗ. ದೇಹದ ಇತರ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಲಿವರ್‌ನ ಆರೋಗ್ಯ ತುಂಬಾನೇ ಮುಖ್ಯ. ದೇಹದ ರಕ್ತದಲ್ಲಿ ಕಶ್ಮಲವನ್ನು ಹೊರ ಹಾಕುವಲ್ಲಿ ಲಿವರ್‌ನ ಪಾತ್ರ ತುಂಬಾನೇ ದೊಡ್ಡದು, ಲಿವರ್ ರಕ್ತವನ್ನು ಶುದ್ಧೀಕರಿಸುವ ಕಾರ್ಯವನ್ನು ಮಾಡುತ್ತದೆ. ಲಿವರ್ ಹೊಟ್ಟೆ ಹಾಗೂ ಕರಳುನ ಭಾಗದಲ್ಲಿರುವ ರಕ್ತವನ್ನು ಶುದ್ಧೀಕರಿಸುತ್ತದೆ. ಈ ಕಾರಣಕ್ಕೆ ಲಿವರ್‌ಗೆ ಹಾನಿಯಾದರೆ ದೇಹದ ಇತರ ಭಾಗಗಳಿಗೂ ಹಾನಿಯುಂಟಾಗುತ್ತದೆ.
ಲಿವರ್ ಸಮಸ್ಯೆ ಎಂದರೇನು?ಲಿವರ್‌ಗೆ ಹಾನಿಯಾದರೆ ಲಿವರ್ ಸಮಸ್ಯೆ ಉಂಟಾಗುವುದು. ದೇಹದ ಚಯಪಚಯ ಕ್ರಿಯೆಯಲ್ಲಿ ಲಿವರ್‌ನ ಪಾತ್ರ ತುಂಬಾನೇ ಮುಖ್ಯ. ಯಾವಾಗ ಲಿವರ್‌ಗೆ ಹಾನಿಯಾಗುತ್ತದೋ ಕೂಡಲೇ ಚಿಕಿತ್ಸೆ ಪಡೆಯದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಲಿವರ್‌ನ ಗಾತ್ರ ಅಧಿಕವಾದರೆ ಅದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುವುದು. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಇದು ಪ್ರಾಣಕ್ಕೆ ಕಂಟಕವಾಗುವುದು.
* ನಡೆದಾಡಲು ಕಷ್ಟವಾಗುವುದು, ಮಂಡಿ ನೋವು ಉಂಟಾಗುವುದು.
* ಫ್ಯಾಟಿ ಲಿವರ್‌ನಿಂದ ಲಿವರ್ ಹಾನಿಯಾದರೆ ಪಿತ್ತರಸ ಉತ್ಪತ್ತಿಗೆ ಸಮಸ್ಯೆ ಉಂಟಾಗುವುದು. ಇದರಿಂದಾಗಿ ದೇಹಕ್ಕೆ ಹಲವು ರೀತಿಯ ಸಮಸ್ಯೆ ಉಂಟಾಗುವುದು.
ಫ್ಯಾಟಿ ಲಿವರ್ ಉಂಟಾದರೆ ಈ ಬಗೆಯ ಸಮಸ್ಯೆ ಕಂಡು ಬರುವುದು
* ಹೊಟ್ಟೆ ಉಬ್ಬುವುದು
* ವಾಂತಿ, ಹಸಿವು ಇಲ್ಲದಿರುವುದು, ತೂಕ ಇಳಿಕೆ ಕಡಿಮೆಯಾಗುವುದು
* ತ್ವಚೆ ಬಿಳಿ ಬಣ್ಣಕ್ಕೆ ತಿರುಗುವುದು
* ಕಣ್ಣು ಬಿಳುಚಿಕೊಳ್ಳುವುದು
* ದೈಹಿಕವಾಗಿ ತುಂಬಾ ಸುಸ್ತು
ನಿಮ್ಮ ನಡಿಗೆಯಲ್ಲಿ ವ್ಯತ್ಯಾಸ ಉಂಟಾಗುವುದು?
* ಫ್ಯಾಟಿ ಲಿವರ್ ಸಮಸ್ಯೆ ಉಂಟಾದಾಗ ತುಂಬಾ ಸುಸ್ತು ಉಂಟಾಗುವುದು
* ಕಾಲುಗಳು ತುಂಬಾ ಬಿಗಿಯಾದಂತೆ ಅನಿಸುವುದು
* ನಡೆಯುವಾಗ ದೇಹದಲ್ಲಿ ಸ್ವಾಧೀನವಿರಲ್ಲ
* ಫ್ಯಾಟಿ ಲಿವರ್ ಸಮಸ್ಯೆ ಇದ್ದವರಿಗೆ ವೇಗವಾಗಿ ನಡೆಯಲು ಸಾಧ್ಯವಾಗುವುದಿಲ್ಲ.
* ಕಾಲುಗಳನ್ನು ಎತ್ತಿಡಲು ಕಷ್ಟವಾಗುವುದು
* ಕಾಲುಗಳನ್ನು ಎಳೆದುಕೊಂಡು ನಡೆಯಬೇಕಾಗುತ್ತದೆ.
* ಕೆಲವರಿಗೆ ನಡೆಯುವಾಗ ದೇಹ ಸ್ವಾಧೀನ ತಪ್ಪಿ ಬೀಳಬಹುದು.
ಫ್ಯಾಟಿ ಲಿವರ್ ಸಮಸ್ಯೆ ನಿರ್ಲಕ್ಷ್ಯ ಮಾಡಿದರೆ ಲಿವರ್ ಫೈಲ್ಯೂರ್ ಉಂಟಾಗುವುದು
* ಫ್ಯಾಟಿ ಲಿವರ್ ಸಮಸ್ಯೆ ನಿರ್ಲಕ್ಷ್ಯ ಮಾಡುವಂಥದ್ದು ಅಲ್ವೇ ಅಲ್ಲ.
* ಕೆಲವರಿಗೆ ಫ್ಯಾಟಿ ಲಿವರ್‌ನಿಂದ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ
* ಆದರೆ ಇನ್ನು ಕೆಲವರಿಗೆ ಲಿವರ್ ಫೈಲ್ಯೂರ್ ಉಂಟಾಗುವುದು. ಆದ್ದರಿಂದ ಫ್ಯಾಟಿ ಲಿವರ್ ಎಂದು ಗೊತ್ತಾದ ತಕ್ಷಣ ಚಿಕಿತ್ಸೆ ಪಡೆಯಬೇಕು.
ಫ್ಯಾಟಿ ಲಿವರ್‌ಗೆ ಕಾರಣವೇನು?
* ಅತ್ಯಧಿಕ ಮದ್ಯಪಾನಿಗಳಲ್ಲಿ ಈ ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರುವುದು
* ಒಬೆಸಿಟಿ ಸಮಸ್ಯೆ ಇರುವವರಿಗೆ ಈ ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರುವುದು
* ಅನಾರೋಗ್ಯಕರ ಆಹಾರಶೈಲಿಯಿಂದ ಕೂಡ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುವುದು
* ದೈಹಿಕ ಚಟುವಟಕೆ ಇಲ್ಲದೇ ಇದ್ದರು ಕೂಡ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುವುದು.
ಫ್ಯಾಟಿ ಲಿವರ್ ತಡೆಗಟ್ಟುವ ಆಹಾರಗಳು
* ಮಾಂಸಾಹಾರ
* ಚೀಸ್
* ಯೋಗರ್ಟ್'
* ಕೆಂಪು ಮಾಂಸ
* ಬೇಕರಿ ಆಹಾರ, ಕರಿದ ಆಹಾರ, ತೆಂಗಿನೆಣ್ಣೆ
* ಸಿಹಿ ಪದಾರ್ಥಗಳು, ಕೃತಕ ಸಿಹಿ ಪದಾರ್ಥಗಳು
ಯಾವ ಬಗೆಯ ಆಹಾರಗಳು
* ಕಾಫಿ
* ಗ್ರೀನ್ ಟೀ
* ಬೆಳ್ಳುಳ್ಳಿ
* ಹಣ್ಣುಗಳು
* ತರಕಾರಿ
* ವಿಟಮಿನ್ ಇ
ಸೂರ್ಯಕಾಂತಿ ಬೀಜ
ಬಾದಾಮಿ
ಆಲೀವ್ ಎಣ್ಣೆ ಬಳಸಿ
* ನಿಯಮಿತ ವ್ಯಾಯಾಮ ಮಾಡಿ ಮೈ ತೂಕ ಕಡಿಮೆ ಮಾಡಿ. ಸಮತೂಕವನ್ನು ಹೊಂದುವುದರಿಂದ ಈ ಫ್ಯಾಟಿ ಲಿವರ್ ಸಮಸ್ಯೆ ತಡೆಗಟ್ಟಬಹುದು.