ತಿರುವನಂತಪುರಂ: ಕೇವಲ ಬಂಡವಾಳಶಾಹಿ ರಾಷ್ಟ್ರಗಳು ಮತ್ತು ಇಸ್ಲಾಮಿಕ್ ದೇಶಗಳಿಗೆ ಭೇಟಿ ನೀಡುವ ಕಮ್ಯುನಿಸ್ಟ್ ಮುಖ್ಯಮಂತ್ರಿಗಳು ಕಮ್ಯುನಿಸ್ಟ್ ದೇಶಗಳಿಗೆ ಏಕೆ ಹೋಗುವುದಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸುತ್ತಿದೆ.
ಪಿಣರಾಯಿ ವಿಜಯನ್ ಮತ್ತು ಅವರ ತಂಡ ಕಮ್ಯುನಿಸ್ಟ್ ದೇಶಕ್ಕೆ ಭೇಟಿ ನೀಡಲಿದೆ. ಅಭಿವೃದ್ಧಿ ಮಾದರಿಯನ್ನು ಕಲಿಯಲು ಚೀನಾ, ರμÁ್ಯ ಅಥವಾ ಕೊರಿಯಾಕ್ಕೆ ಅಲ್ಲ ಈ ಪ್ರಯಾಣ. ಕ್ಯೂಬಾಗೆ ತೆರಳಲಿದ್ದಾರೆ. ಅದೂ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಲು. ಮುಖ್ಯಮಂತ್ರಿ ಜೊತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹಾಗೂ ಸಿಬ್ಬಂದಿ ತೆರಳುತ್ತಿದ್ದಾರೆ.
ಕೇರಳ ಸಭಾದ ವತಿಯಿಂದ ಅಮೆರಿಕದಲ್ಲಿ ನಡೆಯಲಿರುವ ಸಮಾವೇಶಕ್ಕೆ ತೆರಳಲಿರುವ ಮುಖ್ಯಮಂತ್ರಿ ಹಾಗೂ ಅವರ ತಂಡ ವಿಶ್ವಬ್ಯಾಂಕ್ ಪ್ರತಿನಿಧಿಗಳೊಂದಿಗೆ ಚರ್ಚಿಸಲಿದೆ ಎನ್ನಲಾಗಿದೆ. ಚರ್ಚಾ ತಂಡದಲ್ಲಿ ಮುಖ್ಯಮಂತ್ರಿ ಖಾಸಗೀ ಕಾರ್ಯದರ್ಶಿ ಇರಲಿದ್ದಾರೆ. ಈ ಎಲ್ಲದಕ್ಕೂ ಅಧಿಕೃತ ಒಪ್ಪಿಗೆ ನೀಡುವಂತೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಲಾಗಿದೆ.
ಮೊನ್ನೆಯಷ್ಟೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಯುಎಇಯಲ್ಲಿ ವ್ಯಾಪಾರ ಸಭೆಯಲ್ಲಿ ಭಾಗವಹಿಸಲು ಅನುಮತಿಗಾಗಿ ಕೇಳಲಾಗಿದ್ದ ಮನವಿಯನ್ನು ತಿರಸ್ಕರಿಸಿತ್ತು.