ತ್ರಿಶೂರ್: ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಮತ್ತೊಮ್ಮೆ ಕಲ್ಲು ತೂರಾಟ ನಡೆದಿದೆ. ಚೋಟಾನಿಕರ ಪೊಲೀಸ್ ಠಾಣೆ ವ್ಯಾಪ್ತಿಯ ಕುರಿಕಾಡ್ ಎಂಬ ಸ್ಥಳದಲ್ಲಿ ಕಲ್ಲು ತೂರಾಟ ನಡೆದಿದೆ.
ವಂದೇ ಭಾರತ್ ಕಾಸರಗೋಡಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ರೈಲಿನ ಕಿಟಕಿಗೆ ಹಾನಿಯಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ ಎಂದು ಆರ್‍ಪಿಎಫ್ ಮಾಹಿತಿ ನೀಡಿದೆ.
ಆರನೇ ಕೋಚ್ ಮೇಲೆ ಕಲ್ಲು ಬಿದ್ದಿದೆ. ಕಲ್ಲು ತೂರಾಟದ ಬಗ್ಗೆ ಪ್ರಯಾಣಿಕರು ಟಿಟಿಆರ್‍ಗೆ ಮಾಹಿತಿ ನೀಡಿದರು. ನಂತರ ಆರ್‍ಪಿಎಫ್‍ಗೆ ಮಾಹಿತಿ ನೀಡಲಾಯಿತು. ಆರ್‍ಪಿಎಫ್ ಮತ್ತು ಪೊಲೀಸರು ಜಂಟಿಯಾಗಿ ಹುಡುಕಾಟ ನಡೆಸಿದ್ದರೂ ಯಾರೂ ಪತ್ತೆಯಾಗಲಿಲ್ಲ. ನಿರ್ಜನ ಸ್ಥಳದಲ್ಲಿ ಕಲ್ಲುತೂರಾಟ ನಡೆದಿದೆ.
ಈ ಹಿಂದೆ ಕಣ್ಣೂರು ವಳಪಟ್ಟಂ ಮತ್ತು ಮಲಪ್ಪುರಂ ತಿರೂರಿನಲ್ಲಿ ವಂದೇ ಭಾರತ್ ಮೇಲೆ ಕಲ್ಲು ತೂರಾಟ ನಡೆದಿತ್ತು. ಕಣ್ಣೂರಿನಲ್ಲಿ ನಡೆದ ಕಲ್ಲು ತೂರಾಟದಲ್ಲಿ ರೈಲಿನ ಕಿಟಕಿ ಗಾಜು ಒಡೆದಿತ್ತು. ತಿರುವನಂತಪುರಂ ಸೇವೆಯ ವೇಳೆ ತಿರೂರ್ ನಿಲ್ದಾಣದಿಂದ ಹೊರಟ ನಂತರ ದಾಳಿ ನಡೆದಿತ್ತು. ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಸಮಾಜ ವಿರೋಧಿಗಳ ದಾಳಿ ನಡೆದಿದೆ. ಉದ್ಘಾಟನಾ ದಿನವೇ ರೈಲಿನಲ್ಲಿ ಪಾಲಕ್ಕಾಡ್ ಸಂಸದ ವಿಆರ್ ಶ್ರೀಕಂಠನ್ ಅವರ ಪೋಸ್ಟರ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಘಟನೆಯಲ್ಲಿ ಐವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.