HEALTH TIPS

ಕೆ. ಆರ್ ಸರ್ಕಲ್ ಅಂಡರ್‌ಪಾಸ್ ದುರಂತ: ಮುಳುಗುತ್ತಿರುವವರನ್ನು ರಕ್ಷಿಸಲು ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ಟ ಮಹಾತಾಯಿ!

 ಮಾರ್ಚ್‌ 21ರಂದು ನಡೆ ಬೆಂಗಳೂರಿನ ಕೆ. ಆರ್‌ ಸರ್ಕಲ್‌ನಲ್ಲಿ ನಡೆದ ಮಳೆ ದುರಂತ ಕೇಳಿದವರು ಆ ನತದೃಷ್ಟೆ ಹೆಣ್ಮಗಳನ್ನು ನೆನೆದು ಅಯ್ಯೋ ಎಂದು ಮರುಕ ಪಡುತ್ತಿದ್ದಾರೆ. ಅವಳ ಸಾವಿಗೆ ದುರ್ವಿಧಿ ಅಂತ ಹೇಳುವುದೇ, ಪ್ರಾಣಯುಳಿಸಬೇಕಾದ ಆಸ್ಪತ್ರೆ ನಡೆದುಕೊಂಡ ಹೀನಾಯ ನಡವಳಿಕೆ ಬಗ್ಗೆ ಹೇಳುವುದೇ ಒಂದು ಗೊತ್ತಾಗುತ್ತಿಲ್ಲ.. ಒಟ್ಟಿನಲ್ಲಿ ಒಂದು ಜೀವ ಹೋಗಿದೆ, ಆದರೆ ಮುಳುಗುತ್ತಿರುವವರ ಜೀವ ಉಳಿಸಲು ಒಂದು ಸೀರೆಯೊಂದು ನೆರವಾಗಿದೆ.

ಆ ಕ್ಷಣದಲ್ಲಿ ದೇವತೆಯಂತೆಯೇ ಬಂದ ಆ ಮಹಿಳೆ ಒಂದು ಕ್ಷಣವೂ ತನ್ನ ಮಾನ ಅಂತ ಯೋಚಿಸದೆ ಅಷ್ಟೂ ಜೀವಗಳನ್ನು ರಕ್ಷಿಸಿರುವ ದೇವತೆಯಾಗಿದ್ದಾಳೆ. ಇಂಥವರನ್ನು ನೋಡಿದಾಗ ಮಾನವೀಯತೆ ಇನ್ನೂ ಇದೆಯಲ್ಲಾ ಎಂಬ ಸಮಧಾನ ಉಂಟಾಗುತ್ತಿದೆ.ಕೆ. ಆರ್ ಸರ್ಕಲ್‌ ದುರಂತದ ವೀಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.

ಮುಳುಗುತ್ತಿರುವವರು ಸೀರೆಯನ್ನು ಹಿಡಿದು ಮೇಲೆ ಬರುತ್ತಿರುವ ವೀಡಿಯೋ ನೋಡಿ, ಆ ವೀಡಿಯೋ ನೋಡಿದಾಗ ಯಾರಾದರೂ ಅಂಗಡಿಯಿಂದ ಸೀರೆ ತಂದು ಕಟ್ಟಿರಬಹುದು ಎಂದೇ ಯೋಚಿಸಿದ್ದೆ, ಆದರೆ ಹಿಂದೆ ಇಂಥ ಒಂದು ರೋಚಕ ಸ್ಪೂರ್ತಿದಾಯಕ ಕತೆ ಇದೆ ಎಂದು ಇಂದು ನನಗೆ ಪವಿತ್ರಾ ಕಡತ್ತಾಲ ಎಂಬುವವರು ಸಾಮಾಜಿಕ ತಾಣದಲ್ಲಿ ಈ ಕುರಿತು ಬರೆದು ಹಾಕುವವರಿಗೆ ತಿಳಿದೇ ಇರಲಿಲ್ಲ. ಈ ಮಹಿಳೆ ಮಾನವೀಯತೆಗೆ ಮತ್ತೊಂದು ಉದಾಹರಣೆಯಾಗಿ ನಮ್ಮೆಲ್ಲರಿಗೂ ಒಂದು ಸ್ಪೂರ್ತಿಯಾಗಿರುವುದರಿಂದ ಅವರು ಶೇರ್ ಮಾಡಿರುವ ವಿಚಾರಗಳನ್ನು ನಾನು ನಮ್ಮ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕೆ ಆರ್‌ ಸರ್ಕಲ್‌ ಅಂಡರ್‌ಪಾಸ್‌ ಮೇ 21 ಮಳೆಗೆ ಮೃತ್ಯುಸ್ವರೂಪಿಯಾಗಿ ಬದಲಾಗಿದ್ದನ್ನು ನೋಡಿದ ಬೆಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಸ್ವಲ್ಪ ಹಿಂದೆ ಖುಷಿ-ಖುಷಿಯಾಗಿ ಕಾರಿನಲ್ಲಿ ಹೋಗುತ್ತಿದ್ದ ಕುಟುಂಬ ತಮ್ಮ ಮಗಳನ್ನು ಕಳೆದುಕೊಂಡು ಗೋಳಾಡುವಂತಾಗಿದೆ. ನೋಡು-ನೋಡುತ್ತಿದ್ದಂತೆಯೇ ಯಾರು ಊಹಿಸಿರದ ರೀತಿಯಲ್ಲಿ ದುರಂತವೊಂದು ಸಂಭವಿಸಿದೆ. ಕಾರು ಚಾಲಕ ಹೇಳಿರುವಂತೆ ನೀರಿನ ಮಟ್ಟ ಹೆಚ್ಚಾಗುತ್ತಿತ್ತು, ಕಾರಿನ ಎಂಜಿನ್ ಆಫ್ ಆದ ಕಾರಣ ಕಾರಣ ಮುಂದೆ ಹೋಗಲಿಲ್ಲ, ನೋಡುತ್ತಿದ್ದಂತೆ ಕಾರು ಮುಳುಗಲಾರಂಭಿಸಿತು, ಅದರಲ್ಲಿದ್ದವರ ಅರಚಾಟ ಕೇಳಿದ ಕೆಲ ಜನರು ನೆರವಿಗೆ ಬಂದರು, ಆದರೆ ಮುಳುಗುತ್ತಿರುವವರನ್ನು ಮೇಲಕ್ಕೆ ತರುವುದು ಹೇಗೆ? ಇವರ ಅರಚಾಟ ಕೇಳಿ ಅಲ್ಲಿಗೆ ಬಂದ ಪಬ್ಲಿಕ್ ಟಿವಿ ಕ್ಯಾಬ್ ಚಾಲಕ ಈಜು ಬರುತ್ತಿರುವುದರಿಂದ ನೀರಿಗೆ ಧುಮಿಕಿದ್ದಾರೆ. ಪ್ರಾಣ ರಕ್ಷಣೆಗೆ ಒದ್ದಾಡುತ್ತಿದ್ದದ್ದು ಒಂದಿಬ್ಬರು ಅಲ್ಲ, ಬರೋಬರಿ ಆರು ಮಂದಿ, ಪಬ್ಲಿಕ್‌ ಟಿವಿ ವರದಿಗಾರ ರಸ್ತೆಯಲ್ಲಿ ನಿಂತು ಜನರನ್ನು ಸಹಾಯಕ್ಕೆ ಕೂಗುತ್ತಿದ್ದರು, ಅಗ ಅವರ ಮುಂದೆ ಬಂದವರೇ ಈ ಮಹಾತಾಯಿ.

ಮುಳುಗುತ್ತಿರುವ ಜನರನ್ನು ನೋಡಿ ಆ ತಾಯಿ ಒಂದು ಕ್ಷಣ ಯೋಚನೆ ಮಾಡಿಲ್ಲ, ತನ್ನ ಮಾನ ಅಂತೆಲ್ಲಾ ಯೋಚಿಸದೆ ಆ ಜೀವಗಳು ಉಳಿಯಬೇಕೆಂದು ತಾನು ಉಟ್ಟಿದ್ದ ಸೀರೆಯನ್ನೇ ಬಿಚ್ಚಿ ಕೊಡುತ್ತಾಳೆ, ನಡು ರಸ್ತೆಯಲ್ಲಿ ಒಬ್ಬ ಮಹಿಳೆ ಸೀರೆ ಬಿಚ್ಚಿಕೊಟ್ಟು ಜನರ ರಕ್ಷಣೆ ಮಾಡಲು ಮುಂದಾಗುತ್ತಾಳೆ ಎಂದರೆ ಅವಳು ಎಂಥ ಮಹಾತಾಯಿ ಇರಬಹುದು, ಈ ಜನರ ಪಾಲಿಗೆ ದೇವತೆಯಾದಳು.

ಆಕೆ ಸೀರೆಯನ್ನು ಬಿಚ್ಚಿಕೊಟ್ಟಾಗ ಅಲ್ಲಿದ್ದ ಮಹಿಳೆಯೊಬ್ಬರು ತನ್ನ ದುಪ್ಪಟ ಆಕೆಗೆ ಕೊಡುತ್ತಾರೆ, ಒಬ್ಬ ಪುರುಷ ತನ್ನ ಶರ್ಟ್ ಬಿಚ್ಚಿ ಆಕೆಗೆ ಕೊಡುತ್ತಾರೆ, ಆಕೆ ಅಲ್ಲಿಂದ ಆಟೋದಲ್ಲಿ ಹೊರಟು ಬಿಡುತ್ತಾಳೆ, ಆಕೆ ಯಾರು, ಏನು ಅಂತ ಗೊತ್ತಿಲ್ಲ, ಆದರೆ ಆ ಕ್ಷಣ ಆಕೆ ಆ ರೀತಿ ಮಾಡದೇ ಹೋಗಿದ್ದರೆ ಇನ್ನೂ ಭೀಕರವಾಗುತ್ತಿತ್ತು. ಆ ಮಹಾತಾಯಿಯನ್ನು ಭಗವಂತ ಚೆನ್ನಾಗಿ ಇಟ್ಟಿರಲಿ, ಆಕೆ ನಡೆದುಕೊಂಡ ರೀತಿ ನಮ್ಮೆಲ್ಲರಿಗೂ ಸ್ಪೂರ್ತಿ. ತನ್ನ ಮಾನ ಪಣಕ್ಕಿಟ್ಟು ಜೀವದಾನ ಮಾಡಿದ್ದಾಳೆ, ಅಮ್ಮಾ ನಿಮಗೊಂದು ದೊಡ್ಡ ಸಲಾಂ...ಮಾನವೀಯತೆ ಇನ್ನೂ ಉಳಿದಿದೆ ಎಂಬುವುದೇ ಸಮಧಾನ..



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries