ಗುವಾಹಟಿ: ಅಸ್ಸಾಂ ಸರ್ಕಾರವು ಶಾಲಾ ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿದೆ.
'ಕೆಲ ಶಿಕ್ಷಕರು ತಮ್ಮಿಷ್ಟದ, ಕಣ್ಣು ಕುಕ್ಕುವಂತಹ ಉಡುಪುಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಪ್ಪತಕ್ಕದ್ದಲ್ಲ.
'ಶಿಕ್ಷಕರು ಇನ್ನು ಮುಂದೆ 'ಫಾರ್ಮಲ್' ದಿರಿಸಿನಲ್ಲಿ (ಪ್ಯಾಂಟ್ ಮತ್ತು ಅಂಗಿ) ಶಾಲೆಗಳಿಗೆ ಹಾಜರಾಗಬೇಕು. ಶಿಕ್ಷಕಿಯರು ಸೀರೆ, ಸಭ್ಯ ರೀತಿಯ ಸಲ್ವಾರ್ ಸೂಟ್‌ಗಳನ್ನಷ್ಟೇ ಉಡಬೇಕು. ಇವು ತಿಳಿ ವರ್ಣದಿಂದ ಕೂಡಿರಬೇಕು. ಶಿಕ್ಷಕಿಯರು ಟಿ-ಶರ್ಟ್, ಜೀನ್ಸ್ ಮತ್ತು ಲೆಗ್ಗಿನ್ಸ್‌ಗಳನ್ನು ಧರಿಸುವಂತಿಲ್ಲ' ಎಂದೂ ಹೇಳಲಾಗಿದೆ.
ರಾಜ್ಯದ ಶಿಕ್ಷಣ ಸಚಿವ ರನೋಜ್ ಪೆಗು ಅವರು ಈ ಅಧಿಸೂಚನೆಯ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.