ನವದೆಹಲಿ: ವಿಶ್ವವಿದ್ಯಾಲಯಗಳಲ್ಲಿ ಆರ್‌ಎಸ್‌ಎಸ್ ಹಿನ್ನೆಲೆ, ಚಿಂತನೆ ಹೊಂದಿರುವ ಕುಲಪತಿ ಮತ್ತು ಶಿಕ್ಷಕರ ನೇಮಕಾತಿಯು ಸ್ವಜನಪಕ್ಷಪಾತಕ್ಕೆ ತಾಜಾ ಉದಾಹರಣೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಮೂಲಕ, 'ತಮ್ಮ ಸರ್ಕಾರದಲ್ಲಿ ತಂದ ಆಮೂಲಾಗ್ರ ಬದಲಾವಣೆಗಳಿಂದ ನೇಮಕಾತಿ ವ್ಯವಸ್ಥೆಯಲ್ಲಿದ್ದ ಸ್ವಜನಪಕ್ಷಪಾತ ಕೊನೆಯಾಗಿದೆ' ಎಂದಿದ್ದ ಪ್ರಧಾನಿ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
'ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಕೊನೆಯಾಗಿದೆ ಎಂದಿದ್ದಾರೆ. ಅಭಿನಂದನೆಗಳು. ಆದರೆ ವಿಶ್ವವಿದ್ಯಾಲಯಗಳಲ್ಲಿ ಆರ್‌ಎಸ್‌ಎಸ್ ಹಿನ್ನೆಲೆಯ ಕುಲಪತಿ ಮತ್ತು ಶಿಕ್ಷಕರ ನೇಮಕಾತಿಯು ಸ್ವಜನಪಕ್ಷಪಾತಕ್ಕೆ ತಾಜಾ ಉದಾಹರಣೆ. ಇದಕ್ಕೆ ಏನು ಹೇಳುತ್ತೀರಿ' ಎಂದು ಸಿಬಲ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.