HEALTH TIPS

ದುಃಖದಿಂದ ಹೊರಬರೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ!

 ಸಂತೋಷವಾಗಿರಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಜೀವನದಲ್ಲಿ ಎದುರಾಗೋ ಕೆಲವೊಂದು ಸಂಕಷ್ಟಗಳಿಂದಾಗಿ ಪ್ರತಿಯೊಬ್ಬರಿಗೂ ಖುಷಿಯಾಗಿರೋದಕ್ಕೆ ಸಾಧ್ಯವಾಗಿರೋದಿಲ್ಲ. ಆದರೆ ನಮ್ಮ ಜೀವನದ ಬಗ್ಗೆ ನಿರ್ಧರಿಸುವವರು ನಾವೇ ಹೊರತು ಬೇರ್ಯಾರು ಅಲ್ಲ. ಹೀಗಾಗಿ ನಮ್ಮ ಜೀವನದಲ್ಲಿ ಖುಷಿ ಕಂಡುಕೊಳ್ಳುವ ಮಾರ್ಗ ನಮ್ಮ ಕೈಯಲ್ಲಿದೆ. ಅಷ್ಟಕ್ಕು ಪ್ರತಿನಿತ್ಯ ನಾವು ಖುಷಿಯಿಂದಿರಲು ಹಾಗೂ ಪ್ರೇರಣೆಯಿಂದಿರಲು ಏನು ಮಾಡ್ಬೇಕು? ಈ ಟಿಪ್ಸ್ ಗಳನ್ನು ಫಾಲೋ ಮಾಡಿದ್ರೆ ಖಂಡಿತ ಜೀವನದಲ್ಲಿ ಖುಷಿಯಾಗಿ ಇರಬಹುದು.

1. ನಿಮ್ಮನ್ನು ನೀವೇ ಪ್ರಶಂಶಿಸಿ
ನಾವು ಯಾವುದಾದರೂ ಒಳ್ಳೆಯ ಕೆಲಸ ಮಾಡಿದಾಗ ಅಥವಾ ಏನಾದರೂ ಸಾಧನೆ ಮಾಡಿದಾಗ ಇತರರು ಬಂದು ನಮಗೆ ಬೆನ್ನು ತಟ್ಟಬೇಕು, ನಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಬೇಕು ಎನ್ನುವ ಆಸೆ ಖಂಡಿತ ನಮಗೆ ಇದ್ದೇ ಇರುತ್ತದೆ. ಒಂದು ವೇಳೆ ಬೇರ್ಯಾರು ನಮ್ಮನ್ನು ಪ್ರಶಂಶಿಸದೇ ಹೋದರೆ ಆ ಸಮಯದಲ್ಲಿ ನಮಗೆ ನೋವಾಗೋದು ಸಹಜ. ಹೀಗಾಗಿ ನಾವು ಮಾಡಿದ ಕೆಲಸಕ್ಕಾಗಿ ಇತರರು ಪ್ರಶಂಶಿಸಲಿ ಎಂದು ಖಂಡಿತ ಕಾಯಲೇಬೇಡಿ. ಒಳ್ಳೆಯ ಕೆಲಸ ಮಾಡಿದಾಗ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ.
2. ಪ್ರತಿಯೊಂದು ವಿಚಾರದ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿ
ಮನುಷ್ಯ ಆತನ ಜೀವನದಲ್ಲಿ ಕೆಟ್ಟ ಘಟನೆಗಳು ನಡೆದು ಹೋದ್ರೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ಆತನಲ್ಲಿ ಇರೋದಿಲ್ಲ. ಏಕಾಏಕಿ ಆತ ಕುಗ್ಗಿ ಹೋಗುತ್ತಾನೆ. ಏನಾದ್ರು ಕೆಟ್ಟದಾದರೆ ಸಾಕು ಅದರ ಬಗ್ಗೆ ಚಿಂತಿಸುತ್ತಾ ಕೂರುತ್ತಾನೆ. ಅದರ ಬದಲಾಗಿ ಎಲ್ಲವನ್ನೂ ಧನಾತ್ಮಕವಾಗಿ ಯೋಚಿಸಿ ನೋಡಿ. ಖಂಡಿತ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.
3. ಇತರರನ್ನು ಶ್ಲಾಘಿಸಿ 
ಬೇರೆಯವರು ಒಳ್ಳೆಯ ಕೆಲಸ ಮಾಡಿದಾಗ, ಏನಾದರೂ ಸಾಧನೆ ಮಾಡಿದಾಗ ಅವರನ್ನು ಶ್ಲಾಘಿಸಿ. ಹೊಟ್ಟೆ ಕಿಚ್ಚು ಪಡುವುದನ್ನು ಬಿಟ್ಟು ಇನ್ನೊಬ್ಬರ ಖಷಿಯಲ್ಲಿ ನಿಮ್ಮ ಖುಷಿಯನ್ನು ಕಂಡರೆ ನೀವು ಸಂತೋಷವಾಗಿರುತ್ತೀರಿ. ನಿಮ್ಮ ಸ್ನೇಹಿತನೋ ಅಥವಾ ನಿಮ್ಮ ಸಂಬಂಧಿಕರು ಯಾರಾದರೂ ಉತ್ತಮ ಹುದ್ದೆಗೆ ಏರುತ್ತಿದ್ದರೆ ಹೊಟ್ಟೆ ಕಿಚ್ಚು ಪಡಲು ಹೋಗಬೇಡಿ. ಇದರಿಂದ ನಿಮ್ಮ ಮನಃಶಾಂತಿ ಹಾಳಾಗುತ್ತದೆ.
4. ನಿಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಲಿ 
ಕೆಲವೊಂದು ಸಲ ನಮ್ಮ ಖುಷಿಗೆ ನಮ್ಮ ಸುತ್ತಮುತ್ತಲಿನ ಜನ ಹಾಗೂ ಪರಿಸರ ಕಾರಣವಾಗುತ್ತದೆ. ನಮ್ಮ ಹತ್ತಿರ ಇರುವವರು ಮಂಕಾಗಿದ್ದರೆ ನಾವು ಕೂಡ ಆಕ್ಟೀವ್ ಆಗಿರೋದಕ್ಕೆ ಸಾಧ್ಯವಿಲ್ಲ. ಇನ್ನೂ ನಮ್ಮ ಖುಷಿಗೆ ನಾವು ವಾಸಿಸುವ ಪರಿಸರ ಕೂಡ ಕಾರಣವಾಗುತ್ತದೆ. ಶಬ್ಧ ಮಾಲಿನ್ಯ ಅಥವಾ ಜನ ಜಂಗುಳಿ ಇರುವ ಕಡೆ ವಾಸಿಸೋದಕ್ಕೆ ತುಂಬಾನೇ ಕಷ್ಟ. ಹೀಗಾಗಿ ನಿಮ್ಮ ಮನೆಯ ಸುತ್ತ ಹೂವು ಮತ್ತು ಸಸಿಗಳಿಂದ ತುಂಬಿರುವಂತೆ ನೋಡಿಕೊಳ್ಳಿ. 
5. ನಗುತ್ತಾ ಇರಬೇಕು ನಾವು 
ಆರೋಗ್ಯವಾಗಿರಲು ನಗು ಒಂದು ರೀತಿ ಚಿಕಿತ್ಸೆ ಇದ್ದ ಹಾಗೆ. ಹೀಗಾಗಿ ಯಾವಾಗಲೂ ನಿಮ್ಮ ಮುಖವನ್ನು ಗಂಟು ಹಾಕುತ್ತಾ ಕೂರಬೇಡಿ. ನಿಮ್ಮ ಮನೆಯವರು, ಸ್ನೇಹಿತರು ಹಾಗೂ ಆಪ್ತರ ಜೊತೆಗೆ ನಗುತ್ತಾ ಮಾತನಾಡಿ. ನಿಮ್ಮ ಮುಖದಲ್ಲಿ ಯಾವಾಗಲೂ ಒಂದು ಕಿರು ನಗುವಿರಲಿ. ಇದು ಕೂಡ ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ. 
6. ಧನಾತ್ಮಕವಾಗಿ ಚಿಂತಿಸುವವರ ಜೊತೆಗೆ ಸ್ನೇಹ ಮಾಡಿ 
ನಾವು ಯಾವ ರೀತಿ ಚಿಂತಿಸುತ್ತೇವೆಯೋ ಅದೇ ರೀತಿ ನಮ್ಮ ಜೀವನ ಸಾಗುತ್ತದೆ. ಅದೇ ರೀತಿ ನಮ್ಮ ಬಳಗವು ಕೂಡ ನಮ್ಮ ಮೇಲೆ ಅಪಾರ ಪರಿಣಾಮವನ್ನು ಬೀರುತ್ತದೆ. ನಮ್ಮ ಸ್ನೇಹಿತರು ಧನಾತ್ಮಕವಾಗಿ ಚಿಂತಿಸುತ್ತಾ ಯಾವಾಗಲೂ ಖುಷಿಯಾಗಿದ್ದರೆ ಅವರ ಜೊತೆಗೆ ನಾವು ಕೂಡ ಸಂತೋಷವಾಗಿರುತ್ತೇವೆ. ನಮ್ಮ ಸಂಘ ಸರಿಯಿಲ್ಲದಿದ್ದರೆ ನಾವು ಖುಷಿಯಾಗಿರಲು ಸಾಧ್ಯವಿಲ್ಲ.

7. ನೋವಿನ ಬಗ್ಗೆ ಚಿಂತಿಸಬೇಡಿ
ನಿಮ್ಮ ಮನಸ್ಸಿಲ್ಲಿ ನೂರಾರು ನೋವುಗಳು ಇರಬಹುದು. ಹಾಗಂತ ಅದರ ಬಗ್ಗೆ ದುಃಖಿಸುತ್ತಾ ಕೂರಬೇಕಾದ ಅವಶ್ಯಕತೆ ಇಲ್ಲ. ನೋವು, ಸುಃಖ ಮನುಷ್ಯನಿಗೆ ಬಾರದೇ ಮರಕ್ಕೆ ಬರೋದಿಕ್ಕೆ ಸಾಧ್ಯಾನಾ? ಹೀಗಾಗಿ ಆದಷ್ಟು ನಿಮ್ಮ ಮನಸ್ಸನ್ನು ಬೇರೆಡೆಗೆ ಕೇಂದ್ರಿಕರಿಸೋದಕ್ಕೆ ಪ್ರಯತ್ನಿಸಿ. ನೋವಿನಿಂದ ಹೊರಬಂದು ಖುಷಿಯಾಗಿರಿ. ಚಿಂತಿಸುತ್ತಾ ಕೂತರೇ ಪ್ರಯೋಜನವಿಲ್ಲ.

8. ಯೋಗ, ಧ್ಯಾನ ಮಾಡಿ
ಮನಸ್ಸಿಗೆ ಶಾಂತಿ ಸಿಗುತ್ತಿಲ್ಲ ಎಂದಾಗ ಅನೇಕ ಜನ ಯೋಗ, ಧ್ಯಾನ ಮಾಡೋದಕ್ಕೆ ಮುಂದಾಗುತ್ತಾರೆ. ಇದನ್ನು ಮಾಡುವುದರಿಂದ ಖಂಡಿತ ನಿಮ್ಮ ಮನಸ್ಸು ಹಗುರಾಗುತ್ತದೆ. ಅಷ್ಟೇ ಅಲ್ಲ, ದೇವಾಲಯಕ್ಕೆ ಹೋಗಿ ಪ್ರಾರ್ಥನೆಯನ್ನು ಸಲ್ಲಿಸಬಹುದು. ಇಲ್ಲವಾದರೆ ಪಾರ್ಕ್ ನಲ್ಲಿ ಏಕಾಂತವಾಗಿ ಕಾಲ ಕಳೆಯಬಹುದು. ಇದರಿಂದ ಕೂಡ ನಿಮ್ಮ ಮನಸ್ಸು ಖುಷಿಯಿಂದಿರುತ್ತದೆ.

ಖಷಿಯಾಗಿರೋದಕ್ಕೆ ಹಲವು ಮಾರ್ಗಗಳಿದೆ. ಆದರೆ ನಾವು ಆ ಮಾರ್ಗಗಳನ್ನು ಕಂಡುಕೊಳ್ಳಬೇಕಷ್ಟೇ. ನೋವಿನ ಬಗ್ಗೆ ಚಿಂತಿಸುತ್ತಾ ಕೂತರೆ ಪ್ರಯೋಜನವಿಲ್ಲ. ದುಃಖವನ್ನು ಮೆಟ್ಟಿ ಮುನ್ನುಗ್ಗುವುದೇ ಜೀವನ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries