ಕೊಟ್ಟಾಯಂ: ಗೂಳಿಯನ್ನು ಮೇಯಿಸಲು ಹೊಲಕ್ಕೆ ಹೋದಾಗ ತನ್ನದೇ ಗೂಳಿಯ ದಾಳಿಯಿಂದ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಆತಂಕಕಾರಿ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಪೊಂಕುನ್ನಂ ಚಮಂಪತಲ್ನಲ್ಲಿ ನಿನ್ನೆ (ಏಪ್ರಿಲ್ 28) ನಡೆದಿದೆ.
ಕೊಟ್ಟಾಯಂ: ಗೂಳಿಯನ್ನು ಮೇಯಿಸಲು ಹೊಲಕ್ಕೆ ಹೋದಾಗ ತನ್ನದೇ ಗೂಳಿಯ ದಾಳಿಯಿಂದ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಆತಂಕಕಾರಿ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಪೊಂಕುನ್ನಂ ಚಮಂಪತಲ್ನಲ್ಲಿ ನಿನ್ನೆ (ಏಪ್ರಿಲ್ 28) ನಡೆದಿದೆ.
ಮೃತ ವ್ಯಕ್ತಿಯನ್ನು ರೆಜಿ ಜಾರ್ಜ್ (60) ಎಂದು ಗುರುತಿಸಲಾಗಿದೆ.
ಈ ಘಟನೆ ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ನಡೆದಿದೆ. ಗೂಳಿಯನ್ನು ಹೊಲದಲ್ಲಿ ಮೇಯಿಸುವಾಗ ಏಕಾಏಕಿ ಗೂಳಿ ರೆಜಿ ಅವರ ಮೇಲೆ ದಾಳಿ ಮಾಡಿದೆ. ಇದನ್ನು ನೋಡಿ ಪತ್ನಿ ಡಾರ್ಲಿ ಕೂಗಿಕೊಂಡಾಗ ಹಸು ಆಕೆಯ ಮೇಲೆಯೂ ದಾಳಿ ಮಾಡಿದೆ. ಆಕೆಯ ಮೈಮೇಲೆ ಎಲ್ಲ ಕಡೆ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಇಬ್ಬರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ರೆಜಿ ಅವರ ಪ್ರಾಣವನ್ನು ಉಳಿಸಲಾಗಲಿಲ್ಲ. ಡಾರ್ಲಿಗೆ ಚಿಕಿತ್ಸೆ ಮುಂದುವರಿದಿದೆ.
ದಂಪತಿಯ ಮಗಳು ಕೆನಡಾದಲ್ಲಿದ್ದಾರೆ. ದಂಪತಿ ವರ್ಷಗಳಿಂದ ಎಮ್ಮೆ, ಹೋರಿಗಳನ್ನು ಸಾಕುತ್ತಿದ್ದಾರೆ. ತನ್ನ ಮೇಲೆ ದಾಳಿ ಮಾಡಿದ ಗೂಳಿಯನ್ನು ಕೆಲ ದಿನಗಳ ಹಿಂದಷ್ಟೇ ರೆಜಿ ಖರೀದಿಸಿದ್ದರು.
ಗೂಳಿಗೆ ರೇಬೀಸ್ ಲಕ್ಷಣ ಕಾಣಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗೂಳಿಯ ಬಾಯಿಂದ ನೊರೆ ಬರುತ್ತಿತ್ತು ಎಂದಿದ್ದಾರೆ. ರೇಬೀಸ್ ಎಂಬುದು ಹುಚ್ಚು ಕಾಯಿಲೆ ಆಗಿದ್ದು, ಇದು ಕೂಡ ದಾಳಿ ಕಾರಣವಾಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ರೆಜಿ ಮೃತದೇಹವನ್ನು ಕಂಜಿರಪಲ್ಲಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.