ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಅಧೀನಂ ಪೀಠಾಧಿಪತಿಗಳು ‘ಸೆಂಗೋಲ್’ (ರಾಜದಂಡ) ಹಸ್ತಾಂತರಿಸಿದರು.
ಹೊಸ ಸಂಸತ್ ಭವನದ ಉದ್ಘಾಟನೆಯ ಮುನ್ನಾದಿನ (ಶನಿವಾರ )ಅಧೀನಂ ಪೀಠಾಧಿಪತಿ ಪವಿತ್ರ ರಾಜದಂಡ ಸೆಂಗೋಲ್ (Sengol) ಅನ್ನು ಪ್ರಧಾನಿ ನರೇಂದ್ರ ಮೋದಿ (Narendera Modi) ಅವರಿಗೆ ಹಸ್ತಾಂತರಿಸಿದರು. ಆ ಮೂಲಕ ಅಧೀನರು ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಭಾನುವಾರ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದಲ್ಲಿ ಐತಿಹಾಸಿಕ ಮತ್ತು ಪವಿತ್ರವಾದ ಸೆಂಗೋಲ್ ಸ್ಥಾಪಿಸಲಿದ್ದಾರೆ.
ರಾಷ್ಟ್ರ ರಾಜಧಾನಿಗೆ ತಲುಪಿದ ಅಧೀನರನ್ನು ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಭೇಟಿ ಮಾಡಿದ್ದು, ಅಧೀನರ ಆಶೀರ್ವಾದ ಪಡೆದರು. ಇದಕ್ಕೂ ಮುನ್ನ ಧರ್ಮಪುರಂ ಮತ್ತು ತಿರುವವಾಡುತುರೈನ ಅಧೀನರು ದೆಹಲಿಗೆ ಆಗಮಿಸಿದ್ದರು.
ಭಾನುವಾರ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದಲ್ಲಿ ಐತಿಹಾಸಿಕ ಮತ್ತು ಪವಿತ್ರವಾದ ಸೆಂಗೋಲ್ ಸ್ಥಾಪಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು 21 ಅಧೀನರು ಈ ಹಿಂದೆ ಚೆನ್ನೈನಿಂದ ದೆಹಲಿಗೆ ತೆರಳಿದ್ದರು. ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ದೆಹಲಿಗೆ ತೆರಳಿದ ಅಧೀನಂಗಳಲ್ಲಿ ಧರ್ಮಪುರಂ ಅಧೀನಂ, ಪಳನಿ ಅಧೀನಂ, ವಿರುಧಾಚಲಂ ಅಧೀನಂ ಮತ್ತು ತಿರುಕೋಯಿಲೂರ್ ಅಧೀನಂ ಸೇರಿದ್ದಾರೆ.
ಏನಿದು ರಾಜದಂಡ?ಈ ಸೆಂಗೋಲ್ ಬ್ರಿಟಿಷರು ಮತ್ತು ಭಾರತದ ನಡುವಿನ ಅಧಿಕಾರ ವರ್ಗಾವಣೆಯ ಮಹತ್ವದ ಐತಿಹಾಸಿಕ ಸಂಕೇತವಾಗಿದೆ. ಪವಿತ್ರ ರಾಜದಂಡ ಸೆಂಗೋಲ್ ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರದ ಸಂಕೇತವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ. ಐತಿಹಾಸಿಕ ‘ಸೆಂಗೋಲ್’ ಸ್ಥಾಪಿಸಲು ಸಂಸತ್ ಭವನ ಅತ್ಯಂತ ಸೂಕ್ತ ಮತ್ತು ಪವಿತ್ರ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಾಷ್ಟ್ರೀಯ ಚಿಹ್ನೆಯಾಗಿ ಸೆಂಗೋಲ್ ಅನ್ನು ಅಳವಡಿಸಿಕೊಳ್ಳುವ ನಿರ್ಧಾರವನ್ನು ಪ್ರಧಾನಿ ಮೋದಿ ತೆಗೆದುಕೊಂಡರು. ನ್ಯಾಯದ ಸಂಕೇತವಾದ ‘ಸೆಂಗೋಲ್’ ಪ್ರತಿಷ್ಠಾಪನೆ ಕುರಿತು ಶುಕ್ರವಾರ ಮಾತನಾಡಿದ ತಿರುವವಡುತುರೈ ಆಧೀನಂನ ಅಂಬಲವನ ದೇಸಿಗ ಪರಮಾಚಾರ್ಯ ಸ್ವಾಮಿಗಳು, ಸೆಂಗೋಲ್‌ಗೆ ಮಹತ್ವ ನೀಡುತ್ತಿರುವುದು ತಮಿಳುನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಅಂದ್ಹಾಗೆ, ನಾಳೆ (ಮಾರ್ಚ್ 28) ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ನಂತರ ಸೆಂಗೋಲ್'ನ್ನ ಲೋಕಸಭಾ ಸ್ಪೀಕರ್ ಕುರ್ಚಿಗೆ ಹತ್ತಿರದಲ್ಲಿ ಇರಿಸಲಾಗುವುದು.