ಮಲಪ್ಪುರಂ: ಮಲಪ್ಪುರಂನ ಪ್ರಸಿದ್ಧ ಮುನ್ನಿಯೂರು ಕಳಿಯಾಟ ಮಹೋತ್ಸವ ಶನಿವಾರ ನಡೆಯಿತು.
ಕಳಿಯಾಟ ಮಹೋತ್ಸವ ಧಾರ್ಮಿಕ ಸಾಮರಸ್ಯ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಹಬ್ಬವೂ ಹೌದು. ಕಳಿಯಾಟ ಮಹೋತ್ಸವವು ಧಾರ್ಮಿಕ ಸಾಮರಸ್ಯ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಕೃಷಿ ಹಬ್ಬವಾಗಿದೆ. ಅನೇಕ ಸ್ಥಳಗಳಿಂದ ಬರುವ ಸಾಧಕರನ್ನು ಗೌರವಿಸುವುದು ಹಬ್ಬದ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾಗಿದೆ. ಈ ಬಾರಿ ಕೇರಳದ ಮೊದಲ ಟ್ರಾನ್ಸ್ಜೆಂಡರ್ ವಕೀಲೆ ಪದ್ಮಾ ಲಕ್ಷ್ಮಿ ಅವರನ್ನು ಅಭಿನಂದಿಸುವ ಮೂಲಕ ಗಮನಾರ್ಹವಾಯಿತು.
ಪದ್ಮಾ ಲಕ್ಷ್ಮಿ ಕೇರಳದ ಮೊದಲ ಟ್ರಾನ್ಸ್‍ಜೆಂಡರ್ ವಕೀಲೆಯಾಗಿ ಇತ್ತೀಚೆಗಷ್ಟೇ ವೃತ್ತಿ ಕ್ಷೇತ್ರ ಪ್ರವೇಶಿಸಿದ್ದರು. ಮೊದಲಿಗರಾಗುವುದು ಯಾವಾಗಲೂ ಕಠಿಣವಾಗಿರುತ್ತದೆ. ಗುರಿಯ ಹಾದಿಯಲ್ಲಿ ಯಾವುದೇ ನೆರವುಗಳಿದ್ದಿರಲಿಲ್ಲ. ಅನೇಕ ಅಡೆತಡೆಗಳು ಎದುರಾಗುತ್ತವೆ. ಮೌನ ಮತ್ತು ಹಿಂದಕ್ಕೆ ತಳ್ಳಲು ಜನರಿರುತ್ತಾರೆ. ಎಲ್ಲವನ್ನೂ ದಾಟಿ ಕೇರಳದ ಮೊದಲ ಟ್ರಾನ್ಸ್ಜೆಂಡರ್ ವಕೀಲೆ ಪದ್ಮಾ ಲಕ್ಷ್ಮಿಗೆ ಅಭಿನಂದನೆಗಳು" ಎಂದು ಬರೆದಿದ್ದ ಬ್ಯಾನರ್ ಗಮನ ಸೆಳೆದಿತ್ತು.
ಹಾರುವ ಕುದುರೆಯ ರೀತಿಯ ಚಿತ್ರ ಬ್ಯಾನರ್ ನಲ್ಲಿ ಗಮನ ಸೆಳೆಯಿತು. ಚಿತ್ರವನ್ನು ಈಗಾಗಲೇ ಹಲವರು ಶೇರ್ ಮಾಡಿದ್ದಾರೆ. ಭೌತಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಪದ್ಮಾ ಲಕ್ಷ್ಮಿ ಕಾನೂನು ಅಧ್ಯಯನಕ್ಕೆ ವಾಲಿದರು. ಎರ್ನಾಕುಳಂ ಕಾನೂನು ಕಾಲೇಜಿನಿಂದ ಎಲ್‍ಎಲ್‍ಬಿ ಪದವಿ ಪಡೆದಿದ್ದರು.