HEALTH TIPS

'ದೇಶದಲ್ಲಿ ಎಲ್ಲಿಯೂ ನಡೆಯದ ಘಟನೆ; ವೈದ್ಯರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಆಸ್ಪತ್ರೆಗಳನ್ನು ಮುಚ್ಚಿ'; ಸರ್ಕಾರವನ್ನು ತೀವ್ರ ಟೀಕಿಸಿದ ಹೈಕೋರ್ಟ್

            ಎರ್ನಾಕುಳಂ: ಯುವ ವೈದ್ಯೆ ವಂದನಾ ಹತ್ಯೆಗೆ ಹೈಕೋರ್ಟ್ ತೀವ್ರ ಪ್ರತಿಕ್ರಿಯೆ ನೀಡಿದೆ. ವೈದ್ಯರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಆಸ್ಪತ್ರೆಗಳನ್ನು ಮುಚ್ಚುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ. 

            ದೇಶದಲ್ಲಿ ಎಲ್ಲಿಯೂ ನಡೆಯದ ಬೆಳವಣಿಗೆಗಳು ಕೇರಳದಲ್ಲಿ ನಡೆಯುತ್ತಿವೆ ಎಂದು ನ್ಯಾಯಾಲಯ ಟೀಕಿಸಿದೆ. ಇಂದು ಅತ್ಯಂತ ಕೆಟ್ಟ ಘಟನೆ ಸಂಭವಿಸಿದೆ ಮತ್ತು ಈ ವಿಷಯವನ್ನು ನಿರಂತರವಾಗಿ ಪರಿಗಣಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಪೋಲೀಸರ ಬಳಿ ಕೋವಿಯೆಂಬುದೊಂದು ಇಲ್ಲವೇ, ಪೆÇಲೀಸರ ಬಳಿ ಬಂದೂಕು ಏಕೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಜನರ ಪ್ರಾಥಮಿಕ ಭದ್ರತೆ ಪೆÇಲೀಸರ ಜವಾಬ್ದಾರಿಯಲ್ಲವೇ ಎಂದೂ ನ್ಯಾಯಾಲಯ ಕೇಳಿದೆ.

              ಕೊಲೆಯಾದ ವಂದನಾಳ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರಿಗೆ ಘಟನೆ ಅಸಹನೀಯವಾಗಿದೆ ಎಂದು ತಿಳಿದಿದೆ ಎಂದು ನ್ಯಾಯಾಲಯ ಹೇಳಿದೆ. ವಂದನಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಹೈಕೋರ್ಟ್ ಕಲಾಪ ಆರಂಭವಾಯಿತು. ಯಾವುದೇ ಸಂತೋಷವಿಲ್ಲದೆ ಈ ಸದನವನ್ನು ನಡೆಸಲಾಗುತ್ತಿದೆ ಎಂದು ಹೈಕೋರ್ಟ್ ಬೊಟ್ಟುಮಾಡಿದೆ.  ವಿದ್ಯಾರ್ಥಿಗಳು ಮತ್ತು ಪೋಷಕರು ಭಯದಲ್ಲಿದ್ದಾರೆ ಎಂದು ಆರೋಗ್ಯ ವಿಶ್ವವಿದ್ಯಾಲಯವು ಅರ್ಜಿಯಲ್ಲಿ ತಿಳಿಸಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries