ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಸರ್ಕಸ್ ಕಲಾವಿದನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಸರ್ಕಸ್ ಕಲಾವಿದನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಜಮ್ಮುವಿನ ಉಧಂಪುರ ನಿವಾಸಿ ದೀಪು ಹತ್ಯೆಯಾದ ಸರ್ಕಸ್ ಕಲಾವಿದ. ಇವರು ಅನಂತನಾಗ್‌ನ ಜಂಗ್ಲಾಟ್ ಮಂಡಿಯ ಸಮೀಪದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಖಾಸಗಿ ಸರ್ಕಸ್ ಮೇಳದಲ್ಲಿ ಕೆಲಸ ಮಾಡುತ್ತಿದ್ದರು.
ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತಯಬಾದ ನಂಟಿರುವ 'ಕಾಶ್ಮೀರ್ ಫ್ರೀಡಂ ಫೈಟರ್' ಎಂಬ ಉಗ್ರ ಸಂಘಟನೆಯು ಈ ಹತ್ಯೆಯ ಹೊಣೆ ಹೊತ್ತಿದೆ.