ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ನಾಯಕ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಕಿವಿಮಾತು ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ನಾಯಕ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಕಿವಿಮಾತು ಹೇಳಿದ್ದಾರೆ.
'ಮುಂದಿನ ಐದು ವರ್ಷದಲ್ಲಿ ಜನ ಮನ ಗೆಲ್ಲಿ' ಎಂದು ಸಲಹೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವುದು ಕಷ್ಟ. ಜನರ ಮನ ಗೆಲ್ಲುವುದು ಇನ್ನೂ ಕಠಿಣ. ಮುಂದಿನ ಐದು ವರ್ಷದಲ್ಲಿ ಮುಕ್ತ, ಪ್ರಾಮಾಣಿಕ ಹಾಗೂ ತಾರತಮ್ಯ ಮಾಡದೆ ಜನರ ಹೃದಯವನ್ನೂ ಗೆಲ್ಲಿ' ಎಂದು ಅವರು ಹೇಳಿದ್ದಾರೆ.
ಅಲ್ಲದೆ ಹೀಗೆ ಇಲ್ಲದಕ್ಕೆ ಬಿಜೆಪಿ ಸೋತಿಗೆ ಎಂದು ಅವರು ನುಡಿದಿದ್ದಾರೆ.
ಯುಪಿಎ ಸರ್ಕಾರದ ಎರಡೂ ಅವಧಿಯಲ್ಲಿ ಸಚಿವರಾಗಿದ್ದ ಕಪಿಲ್ ಸಿಬಲ್, 2022ರ ಮೇ ತಿಂಗಳಿನಲ್ಲಿ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಕಾಂಗ್ರೆಸ್‌ನ ಜಿ-23 ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸಿಬಲ್, ಪಕ್ಷದ ಹಲವು ನಿಲುವುಗಳನ್ನು ಬಹಿರಂಗವಾಗಿಯೇ ಟೀಕೆ ಮಾಡಿದ್ದರು.