ಕಾಸರಗೋಡು: ಕೇರಳ ಸಮಾಜವಾದಿ ಯುವ ಒಕ್ಕೂಟ(ಕೆಎಸ್‍ವೈಎಫ್)ದ ಆಶ್ರಯದಲ್ಲಿ 'ಯುವ ಕೇರಳ ಎದ್ದೇಳಿ'ಘೋಷಣೆಯೊಂದಿಗೆ ಯುವ ವಿದ್ಯಾರ್ಥಿಗಳ ಪ್ರಚಾರ ಜಾಥಾ ಮೇ 3 ರಂದು ಕಾಸರಗೋಡಿನಿಂದ ಆರಂಭಗೊಳ್ಳಲಿದೆ. ಮೇ 17 ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ ಎಂದು ಕೆಎಸ್‍ವೈಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಸುಧೀಶ್ ಕಡನ್ನಪಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನಪ್ರತಿನಿಧಿಗಳಾಗಲಿರುವ ವಯಸ್ಸನ್ನು 25 ರಿಂದ 21 ವರ್ಷಕ್ಕೆ ಇಳಿಸಬೇಕು, ನಬಾರ್ಡ್ ಮಾದರಿಯಲ್ಲಿ ಶೈಕ್ಷಣಿಕ ಬ್ಯಾಂಕ್ ಆರಂಭಿಸಬೇಖು, ಮಾದಕ ವ್ಯಸನದ ವಿರುದ್ಧ ಕಟ್ಟುನಿಟ್ಟಿನ ಕಾನೂನು ರಚಿಸಬೇಕು, ಕಾನೂನು ರಚನಾ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಖಚಿತಪಡಿಸಬೇಕು, ಜಾಗತಿಕ ಗುಣಮಟ್ಟದ ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಅಂಧವಿಶ್ವಾಸ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಖು ಮುಂತಾದ ಧ್ಯೇಯವಾಕ್ಯದೊಂದಿಗೆ ಪ್ರಚಾರ ಜಾಥಾ ನಡೆಯಲಿದೆ.
ಮೇ 3ರ ಬುಧವಾರ ಬೆಳಗ್ಗೆ 10 ಗಂಟೆಗೆ ಕೇರಳ ಸೋಷಿಯಲಿಸ್ಟ್ ಯೂತ್ ಫೆಡರೇಶನ್ ಕಾರ್ಯದರ್ಶಿ ಸುದೀಶ್ ಕಡನ್ನಪಳ್ಳಿ ನೇತೃತ್ವದಲ್ಲಿ ನಡೆಯಲಿರುವ ಜಥಾವನ್ನು ಸಿಎಂಪಿ ಪ್ರಧಾನ ಕಾರ್ಯದರ್ಶಿ ಸಿ.ಪಿ.ಜಾನ್ ಉದ್ಘಾಟಿಸುವರು. ಸಮಾರಂಭದಲ್ಲಿ ಐಕ್ಯರಂಗದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಎಂಪಿ ಜಿಲ್ಲಾ ಕಾರ್ಯದರ್ಶಿ ಟಿ.ವಿ ಉಮೇಶನ್, ಕೆಎಸ್‍ವೈಎಫ್ ಸದಸ್ಯರಾದ ಉಮೇಶ್ ಕೆ.ವಿ, ನಿವೇದ್ ರವಿ, ಶ್ರೀಜಾ ಉಪಸ್ಥಿತರಿದ್ದರು.