ದೆಹಲಿ: ಸೆಂಟ್ರ್ಲ್ ಬ್ಯುರೋ ಆಫ್ ಸೆಕೆಂಡರಿ ಎಜ್ಯುಕೇಶನ್(CBSE)ನ 10ನೇ ತರಗತಿಯ ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, ಪರೀಕ್ಷೆಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಕಾಯುತ್ತಿದ್ದಾರೆ. ಈ ನಡುವೆ ಸಾಮಾಜಿಕ ತಾಣಗಳಲ್ಲಿ ಸಿಬಿಎಸ್‌ಇ ಫಲಿತಾಂಶವನ್ನು ಮೇ 11ರಂದು ಪ್ರಕಟಿಸಲಾಗುತ್ತದೆ ಎಂಬ ಸೂಚನೆ ಹರಿದಾಡಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಸಿಬಿಎಸ್‌ಇ ಬೋರ್ಡ್, ಈ ಸೂಚನೆಯು ನಕಲಿಯಾಗಿದೆ. ಇದನ್ನು ನಂಬಬಾರದು. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೋಟೀಸ್ ನಕಲಿ ಎಂದು ಸಿಬಿಎಸ್‌ಇ ವಕ್ತಾರರು ಖಚಿತಪಡಿಸಿದ್ದಾರೆ.
ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಇಂತಹ ನಕಲಿ ನೋಟಿಸ್‌ಗಳಿಗೆ ಬಲಿಯಾಗದಂತೆ ಸೂಚಿಸಲಾಗಿದೆ. ಸಿಬಿಎಸ್‌ಇ 10, 12 ನೇ ತರಗತಿಯ ಫಲಿತಾಂಶಗಳನ್ನು ಯಾವಾಗ ಪ್ರಕಟಿಸಲಾಗುವುದೆಂದು ಅಧಿಕೃತವಾಗಿ ಪ್ರಕಟಿಸುವುದಾಗಿ ಮಂಡಳಿಯು ದೃಢಪಡಿಸಿದೆ.