ತ್ರಿಶೂರು: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ 76 ವರ್ಷದ ವೃದ್ಧನ ಅಂಗಿಯ ಜೇಬಿನಲ್ಲಿರಿಸಿದ್ದ ಮೊಬೈಲ್ ಫೋನ್ ಸ್ಫೋಟಿಸಿದ ಘಟನೆ ನಡೆದಿದೆ.
ತ್ರಿಶೂರು: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ 76 ವರ್ಷದ ವೃದ್ಧನ ಅಂಗಿಯ ಜೇಬಿನಲ್ಲಿರಿಸಿದ್ದ ಮೊಬೈಲ್ ಫೋನ್ ಸ್ಫೋಟಿಸಿದ ಘಟನೆ ನಡೆದಿದೆ.
ಅದೃಷ್ಟವಶಾತ್ ವೃದ್ಧ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸಿಸಿಟಿವಿಯಲ್ಲಿ ದ್ಯಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಂಗಡಿಯಲ್ಲಿ ಕುಳಿತುಕೊಂಡಿದ್ದ ವೃದ್ದನ ಜೇಬಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಏಕಾಏಕಿ ಜೇಬಿನಲ್ಲಿದ್ದ ಮೊಬೈಲ್ ಫೋನ್ ಸ್ಫೋಟಿಸಿದೆ. ಕೆಲವು ಕ್ಷಣ ವಿಚಲಿತಗೊಂಡ ವೃದ್ಧ, ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಕೇರಳದಲ್ಲಿ ಒಂದು ತಿಂಗಳೊಳಗೆ ನಡೆದ ಮೂರನೇ ಘಟನೆ ಇದಾಗಿದೆ.
ಬಳಿಕ ಘಟನೆ ವಿವರಿಸಿರುವ ವೃದ್ಧ, ಕಳೆದ ವರ್ಷ ಒಂದು ಸಾವಿರ ರೂಪಾಯಿ ನೀಡಿ ಬೇಸಿಕ್ ಫೀಚರ್ ಹೊಂದಿದ ಮೊಬೈಲ್ ಫೋನ್ ಖರೀದಿಸಲಾಗಿತ್ತು. ಇಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಹೇಳಿದ್ದಾರೆ.