HEALTH TIPS

ಮುಂದಿನ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ರಕ್ಷಣಾ ಇಲಾಖೆ

             ವದೆಹಲಿ: ಮುಂದಿನ ವರ್ಷ ಕರ್ತವ್ಯಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಾರ್ಚಿಂಗ್ ಮತ್ತು ಬ್ಯಾಂಡ್‌ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸಂಪೂರ್ಣ ನಾರಿ ಶಕ್ತಿ ಪ್ರದರ್ಶನವಾಗಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.

            2024ರ ಪರೇಡ್‌ನ ಯೋಜನೆ ಕುರಿತು ಮಾರ್ಚ್‌ನಲ್ಲಿಯೇ ಮೂರು ರಕ್ಷಣಾಪಡೆಗಳು ಮತ್ತು ವಿವಿಧ ಸಚಿವಾಲಯ, ಇಲಾಖೆಗಳಿಗೆ ಜ್ಞಾಪನಾ ಪತ್ರವನ್ನು ರವಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

              '2024ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳೆಯರು ಮಾತ್ರ ಭಾಗವಹಿಸುವ ಕುರಿತು ಚರ್ಚೆ ನಡೆಸಲಾಗಿದ್ದು, ಜನವರಿ 26ರಂದು ಕರ್ತವ್ಯಪಥದಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಮಾರ್ಚಿಂಗ್, ಬ್ಯಾಂಡ್, ಸ್ತಬ್ಧಚಿತ್ರ ಮತ್ತು ಇತರ ಪ್ರದರ್ಶನಗಳಲ್ಲಿ ಮಹಿಳೆಯರು ಮಾತ್ರ ಭಾಗವಹಿಸಲಿದ್ದಾರೆ' ಎಂದು ನಿರ್ಧರಿಸಲಾಗಿದೆ ಎಂದೂ ಜ್ಞಾ‍ಪನಾ ಪತ್ರದಲ್ಲಿ ಹೇಳಲಾಗಿದೆ.

                  ಈ ವರ್ಷ ನಡೆದ 74ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತವು ತನ್ನ ಮಿಲಿಟರಿ ಶಕ್ತಿಯ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನೂ ಪ್ರದರ್ಶಿಸಿತ್ತು. ಈ ಪರೇಡ್‌ನಲ್ಲಿ, ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ತ್ರಿಪುರದ ಕೋಷ್ಟಕಗಳಲ್ಲಿ 'ನಾರಿ ಶಕ್ತಿ' ಪ್ರಮುಖ ವಿಷಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಈಚೆಗಷ್ಟೇ ಇದೇ ಪ್ರಥಮ ಬಾರಿಗೆ ಭಾರತೀಯ ಸೇನೆಯು ಐವರು ಮಹಿಳಾ ಅಧಿಕಾರಿಗಳನ್ನು ತನ್ನ ಫಿರಂಗಿ ದಳಕ್ಕೆ ನೇಮಕ ಮಾಡಿಕೊಂಡಿದೆ.

                 2023ರ ಪರೇಡ್‌ನಲ್ಲಿ ಭಾರತೀಯ ವಾಯುಪಡೆಯ ಕವಾಯತು ತಂಡವನ್ನು ಮಹಿಳಾ ಅಧಿಕಾರಿಯೊಬ್ಬರು ಮುನ್ನಡೆಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries