ತಿರುವನಂತಪುರಂ: ಕೇರಳ ರಾಜಭವನವು ಮಹಾರಾಷ್ಟ್ರ ದಿನ ಮತ್ತು ಗುಜರಾತ್ ದಿನವನ್ನು ಆಚರಿಸಿತು. ಕೊಚ್ಚಿ ಮತ್ತು ತಿರುವನಂತಪುರಂನಲ್ಲಿರುವ ಗುಜರಾತಿ ಸಮಾಜ ಮತ್ತು ಮರಾಠಿ ಮಂಡಲಗಳ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ರಾಜಭವನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಭಾಗವಹಿಸಿದ್ದರು.
ಸದಸ್ಯರು ಗುಜರಾತಿ ಮತ್ತು ಮರಾಠಿ ಭಾμÉಗಳಲ್ಲಿ ಹಾಡುಗಳನ್ನು ಹಾಡಿದರು, ಗರ್ಬಾ ಮತ್ತು ದಾಂಡಿಯಾ ನೃತ್ಯ ಪ್ರದರ್ಶನ ನಡೆಯಿತು. ರಾಜ್ಯಪಾಲರು ಅವರೊಂದಿಗೆ ಹೆಜ್ಜೆ ಹಾಕಿದರು. ಪಂಜಾರಿ ಮೇಳಗಳೊಂದಿಗೆ ರಾಜ್ಯಪಾಲರು ಅತಿಥಿಗಳನ್ನು ಬರಮಾಡಿಕೊಂಡರು.
ದೇಶದ ಪ್ರತಿಯೊಂದು ರಾಜ್ಯಗಳ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಪ್ರತಿ ರಾಜಭವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.