ತಿರುವನಂತಪುರಂ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಇಂದು ಕೇರಳಕ್ಕೆ ಆಗಮಿಸಲಿದ್ದಾರೆ. ಬಿಎಂಎಸ್ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಸಚಿವರು ಬರಲಿದ್ದಾರೆ.
ಇಂದು ಜಿ20 ಶೃಂಗಸಭೆಯ ಅಂಗವಾಗಿ ಕವಡಿಯಾರ್ ಉದಯಪಾಲಸ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆವ ರಾಜ್ಯ ಮಹಿಳಾ ಕಾರ್ಯಕರ್ತರ ಸಮಾವೇಶವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ನಂತರ ಸಂಜೆ 5.30ಕ್ಕೆ ಇತ್ತೀಚೆಗೆ ಹತ್ಯೆಗೊಳಗಾದ ಡಾ.ವಂದನಾ ದಾಸ್ ಅವರ ಕೊಟ್ಟಾಯಂ ನಿವಾಸಕ್ಕೂ ಸ್ಮೃತಿ ಇರಾನಿ ಭೇಟಿ ನೀಡಲಿದ್ದಾರೆ.
ಕೇಂದ್ರ ಸಚಿವ ವಿ. ಮುರಳೀಧರನ್ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಬಿಎಂಎಸ್ ಅಖಿಲ ಭಾರತ ಸಂಸ್ಥೆಯ ಕಾರ್ಯದರ್ಶಿ ಬಿ. ಸುರೇಂದ್ರ, ಅಖಿಲ ಭಾರತ ಕಾರ್ಯದರ್ಶಿಗಳಾದ ಅಂಜಲಿ ಪಟೇಲ್, ವಿ. ರಾಧಾಕೃಷ್ಣನ್ ಮೊದಲಾದವರು ಭಾಗವಹಿಸುವರು ಎಂದು ಬಿಎಂಎಸ್ ರಾಜ್ಯ ಅಧ್ಯಕ್ಷ ಉಣ್ಣಿಕೃಷ್ಣನ್ ಉಣ್ಣಿತ್ತಾನ್, ಪ್ರಧಾನ ಕಾರ್ಯದರ್ಶಿ ಜಿ.ಕೆ. ಅಜಿತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.