ಮಾವೇಲಿಕ್ಕರ: ಮಹಿಳೆಯೊಬ್ಬರು ಮನೆಯಲ್ಲಿ ನಿಲ್ಲಿರಿಸಿರುವ ದ್ವಿಚಕ್ರ ವಾಹನಕ್ಕೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಅದೂ ಕೂಡ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ ಬಗ್ಗೆ ಕ್ಯಾಮರಾದಲ್ಲಿ ಸೆರೆಯಾದ ಚಿತ್ರದ ಹೆಸರಲ್ಲಿ.
ಮಾವೇಲಿಕರ ಪಲ್ಲರಿಮಂಗಲಂ ಪೆರುಂಬನಂನಲ್ಲಿರುವ ಪದ್ಮಜಾದೇವಿ ಅವರ ಮನೆಯಲ್ಲಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅವರ ವಾಹನಕ್ಕೆ ದಂಡ ವಿಧಿಸಲಾಗಿದೆ.
500 ರೂಪಾಯಿ ದಂಡ ಕಟ್ಟುವಂತೆ ಪದ್ಮಜಾ ಅವರ ಪೋನ್‍ಗೆ ಸಂದೇಶ ಬಂದಿದೆ. ಮೇ 8 ರಂದು ಅವರು ಹೆಲ್ಮೆಟ್ ಇಲ್ಲದೆ ಕಾಯಂಕುಳಂ-ತಿರುವಲ್ಲಾ ಮಾರ್ಗದಲ್ಲಿ ಪ್ರಯಾಣಿಸಿರುವುದು ದಂಡಾರ್ಹವಾಗಿ ಉಲ್ಲೇಖಿಸಲಾಗಿದೆ. ವಾಹನದ ಚಿತ್ರವನ್ನೂ ಕಳುಹಿಸಿದ್ದಾರೆ.
ಮಿಲ್ಮಾ ಉದ್ಯೋಗಿ ಪದ್ಮಜಾ ಅವರು ಮಾವೇಲಿಕರದಿಂದ ಹರಿಪಾಡ್ ಗೆ ಪ್ರತಿದಿನ ಸ್ಕೂಟರ್‍ನಲ್ಲಿ ಹೋಗುತ್ತಾರೆ. ಸಂಬಂಧಿಕರ ಮನೆಯಲ್ಲಿ ವಾಹನವನ್ನು ನಿಲುಗಡೆಗೊಳಿಸಿ ಬಸ್ಸಿನಲ್ಲಿ ಕಚೇರಿಗೆ ತೆರಳುವುದು ವಾಡಿಕೆ. ಸ್ಕೂಟರ್ ಹರಿಪ್ಪಾಡ್ ನ ಮನೆಯಲ್ಲಿ ನಿಲ್ಲಿಸಿರಿಸುವ ವೇಳೆ ಉಲ್ಲಂಘನೆ ನಡೆದಿರುವುದು ಉಲ್ಲೇಖಿಸಲಾಗಿದೆ. ಟ್ರಾಫಿಕ್ ಪೊಲೀಸರು ಕಳುಹಿಸಿರುವ ಪೋಟೋದಲ್ಲಿ ಪ್ಯಾಂಟ್ ಧರಿಸಿದ ಯುವಕ ಹೆಲ್ಮೆಟ್ ಇಲ್ಲದೆ ಸ್ಕೂಟರ್ ಚಲಾಯಿಸುತ್ತಿರುವ ಚಿತ್ರವಿದೆ. ದಂಡವನ್ನು ಆಧರಿಸಿದ ಚಿತ್ರದಲ್ಲಿ ಬೇರೆ ಬಣ್ಣದ ಮತ್ತೊಂದು ವಾಹನವಿದೆ. ಚಿತ್ರದಲ್ಲಿರುವ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯೂ ಸ್ಪಷ್ಟವಾಗಿಲ್ಲ.
ಆದರೂ ಏಕೆ ದಂಡ ಹಾಕಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಪದ್ಮಜಾದೇವಿ ಹೇಳಿದ್ದಾರೆ. ಈ ಅನ್ಯಾಯ ನೋಟೀಸ್ ಜಾರಿ ರದ್ದುಗೊಳಿಸುವಂತೆ ಒತ್ತಾಯಿಸಿ ಪದ್ಮಜಾ ಅವರು ಕಾಯಂಕುಳಂ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ.