ಶಿಮ್ಲಾ : ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಕರ ಆರೋಗ್ಯಕ್ಕಾಗಿ ಹಿಮಾಚಲ ಪ್ರದೇಶ ಸರ್ಕಾರವು 'ಮಾದಕ ವ್ಯಸನ ಮುಕ್ತ ಪುನರ್‌ವಸತಿ' ನೀತಿಯನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ.
ಶಿಮ್ಲಾ : ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಕರ ಆರೋಗ್ಯಕ್ಕಾಗಿ ಹಿಮಾಚಲ ಪ್ರದೇಶ ಸರ್ಕಾರವು 'ಮಾದಕ ವ್ಯಸನ ಮುಕ್ತ ಪುನರ್‌ವಸತಿ' ನೀತಿಯನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ.
ಈ ಕಾನೂನಿನ ಕರಡು ಪ್ರತಿ ಮೇಲಿನ ಸಭೆಯ ನಂತರ ಸುಖು ಮಾತನಾಡಿ, 'ಯುವ ಪೀಳಿಗೆ ಮೊಬೈಲ್ ಫೋನ್‌ಗಳಿಗೆ ಅಂಟಿಕೊಂಡಿದೆ. ಇದು ಅವರನ್ನು ಮಾದಕ ವ್ಯಸನಕ್ಕೆ ಆಕರ್ಷಣೆಗೊಳ್ಳಲು ಕಾರಣವಾಗುತ್ತಿದೆ' ಎಂದರು.
'ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ರಾಷ್ಟ್ರೀಯ ಸಂಸ್ಥೆಯ ಬೆಂಬಲದೊಂದಿಗೆ ಅತ್ಯಾಧುನಿಕ ಮಾದಕ ವ್ಯಸನ ಮುಕ್ತಿ ಮತ್ತು ಪುನರ್‌ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು' ಎಂದು ಹೇಳಿದರು.