ಎರ್ನಾಕುಳಂ: ಕೊಚ್ಚಿ ಕಾಕ್ಕನಾಡ್ ಇನ್ಫೋ ಪಾರ್ಕ್ ಬಳಿ ಬಹುಮಹಡಿ ಕಟ್ಟಡಕ್ಕೆ ನಿನ್ನೆ ರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಪೊಲೀಸ್ ಠಾಣೆ ಸಮೀಪದ ಜಿಯೋ ಇನ್ಫೋಪಾರ್ಕ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಜನರು ಕಟ್ಟಡದೊಳಗೆ ಸಿಲುಕಿಕೊಂಡಿದ್ದಾರೆ. ಕೆಲ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿವೆ.
ಶಾರ್ಟ್ ಸಕ್ರ್ಯೂಟ್ ಕಾರಣ ಎಂಬುದು ಪ್ರಾಥಮಿಕ ಮಾಹಿತಿ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.