ಕಾಸರಗೋಡು: ಜಿಲ್ಲೆಯಲ್ಲಿ ಮಾದಕದ್ರವ್ಯ ವಿರುದ್ಧ ಕಾರ್ಯಾಚರಣೆ ಪೊಲೀಸರು ಚುರುಕುಗೊಳಿಸಿದ್ದು, ಕೇರಳಕ್ಕೆ ಮಾದಕ ದ್ರವ್ಯ ಪೂರೈಸುವ ಜಾಲದ ಪ್ರಮುಖ ಸೂತ್ರಧಾರಿಣಿ, ನೈಜೀರಿಯಾ ಪ್ರಜೆಯಾಗಿರುವ ಮಹಿಳೆಯನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ವಸಿಸುತ್ತಿರುವ ಹಫ್ಸಾ ರಿಹಾನತ್ ಉಸ್ಮಾನ್ ಯಾನೆ ಬ್ಲೇಸಿಂಗ್ ಜೋಯ್(22)ಬಂಧಿತೆ.
ಕಾಸರಗೋಡು ಜಿಲ್ಲಾ ಉಪ ಪೊಲೀಸ್ ವರಿಷ್ಠಾದಿಕಾರಿ ಪಿ.ರಜು ನಿರ್ದೇಶನದನ್ವಯ ಬೇಕಲ ಡಿವೈಎಸ್ಪಿ ಸಿ.ಕೆ ಸುನಿಲ್ ಕುಮಾರ್ ನೇತೃತ್ವದ ಪೊಲಿಸರ ತಂಡ ಬೆಂಗಳೂರಿನಿಂದ ಬಂಧಿಸಿದ್ದಾರೆ. ಮಾದಕ ದ್ರವ್ಯ ಸಾಗಾಟಕ್ಕೆ ಸಂಬಂಧಿಸಿ ಏ. 22ರಂದು ಉದುಮ ಪಳ್ಳ ಎಂಬಲ್ಲಿ ಬಂಧಿತರಾದ ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಅಬೂಬಕ್ಕರ್, ಈತನ ಪತ್ನಿ ಅಮೀನಾ ಅಸರ, ಕರ್ನಾಟಕ ಕಲ್ಯಾಣ ನಗರದ ಎ.ಕೆ ವಸೀಂ, ಬೆಂಗಳೂರು ನಿವಸಿ ಸೂರಜ್ ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೇರಳಕ್ಕೆ ಮಾದಕ ದ್ರವ್ಯ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನೈಜೀರಿಯ ಯುವತಿಯ ಬಗ್ಗೆ ಮಾಹಿತಿ ನೀಡಿದ್ದರು. ನೈಜೀರಿಯ ಯುವತಿಯ ವಾಟ್ಸಪ್ ನಂಬರ್ ಹಿಂಬಾಲಿಸಿ ಬೆಂಗಳೂರಿನಿಂದ ಈಕೆಯನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೆ ಮಾದಕ ದ್ರವ್ಯ ಮಾರಾಟದಲ್ಲಿ ಕೆಳಹಂತದ ಮಾರಟಗಾರರನ್ನು ಮಾತ್ರ ಬಂಧಿಸಲಾಗುತ್ತಿದ್ದು, ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿ ಡಾ> ವಐಭವ್ ಸಕ್ಸೇನಾ ನೇತೃತ್ವದ ಆಪರೇಶನ್ ಕ್ಲೀನ್ ಕಸರಗೋಡು ಕಾರ್ಯಾಚರಣೆಯನ್ವಯ ಮುಖ್ಯ ಸೂತ್ರಧಾರಿಣಿಯನ್ನು ಬಂಧಿಸಲಾಗಿದೆ.