ಮಂಜೇಶ್ವರ: ಕಾವುಗೋಳಿ ಶ್ರೀ ಶಿವ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮೀಯಪದವಿನ ವಿದ್ಯಾವರ್ಧಕ ಮಕ್ಕಳ ಯಕ್ಷಗಾನ ಬಳಗದಿಂದ 'ಹನುಮಾಗಮನ' ಕಥಾಭಾಗದ ತಾಳಮದ್ದಳೆ ಜರಗಿತು.
ಪಾತ್ರ ವರ್ಗದಲ್ಲಿ ಶಾರ್ವರಿ ಯನ್. ನಾವಡ, ಅಭಿರಾಮ ಭಟ್, ವೀಕ್ಷ , ಸಾನ್ನಿಧ್ಯ ಇ. ಮತ್ತು ಸಾನ್ವಿ ಸುವರ್ಣ ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀಮಾಧವ ಮಧೂರು ಸಹಕರಿಸಿದರು. ಅಧ್ಯಾಪಕರಾದ ನಾರಾಯಣ ನಾವಡ ಮಕ್ಕಳಿಗೆ ತರಬೇತಿಯನ್ನು ನೀಡಿದ್ದರು.