HEALTH TIPS

ಸೈಬರ್ ದಾಳಿ: ಬೈಕ್​ಗಳ ಉತ್ಪಾದನೆ ನಿಲ್ಲಿಸಿದ ಸುಜುಕಿ

                  ದೆಹಲಿ: ಭಾರತೀಯ ಬೈಕ್​ಗಳ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಸುಜುಕಿ ಮೋಟಾರ್‌ಬೈಕ್​ ಇಂಡಿಯಾ ಮೇ 10ರಿಂದ ತನ್ನ ಬೈಕ್​ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ತನ್ನ ಸಿಸ್ಟಂಗಳ ಮೇಲೆ ಸೈಬರ್ ದಾಳಿ ನಡೆದ ಹಿನ್ನೆಲೆಯಲ್ಲಿ ಸುಜುಕಿ ಕಂಪನಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಪ್ರತಿದಿನ ಸುಮಾರು 20,000ಕ್ಕೂ ಹೆಚ್ಚು ವಾಹನಗಳ ಉತ್ಪಾದನೆ ಸ್ಥಗಿತವಾಗಿದೆ ಎಂದು ಅಂದಾಜಿಸಲಾಗಿದೆ.

                ಹಾಗಾಗಿ, ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದ ಕಂಪನಿಯು ಮುಂದಿನ ವಾರದಲ್ಲಿ ನಿಗದಿಯಾಗಿದ್ದ ವಾರ್ಷಿಕ ಪೂರೈಕೆದಾರ ಸಮ್ಮೇಳನವನ್ನು ಮುಂದೂಡಿರುವುದಾಗಿ ತನ್ನ ಪಾಲುದಾರರಿಗೆ ಇತ್ತೀಚೆಗೆ ತಿಳಿಸಿದೆ.

                  ಸೈಬರ್​ ದಾಳಿ ತಿಳಿದು ಬಂದ ತಕ್ಷಣವೇ ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ಈ ಕುರಿತು ವರದಿ ಮಾಡಿದ್ದು, ಈ ವಿಷಯವು ತನಿಖಾ ಹಂತದಲ್ಲಿದೆ. ಹಾಗೂ ಭದ್ರತಾ ಉದ್ದೇಶದಿಂದಾಗಿ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ವಕ್ತಾರರು ಹೇಳಿದ್ದಾರೆ.

                  FY23ರಲ್ಲಿ ಸುಮಾರು ಒಂದು ಮಿಲಿಯನ್ ಯುನಿಟ್‌ಗಳ ಉತ್ಪಾದನೆಯೊಂದಿಗೆ, ಸುಜುಕಿ ಮೋಟಾರ್‌ಬೈಕ್​ ದೇಶದ ಐದನೇ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕವಾಗಿದೆ. ಜಪಾನ್​ ಹೊರತು ಪಡಿಸಿ ಭಾರತವು ವಾಹನಗಳ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದು, ಉತ್ಪಾದನೆಯ 20% ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಪ್ತಾಗುತ್ತದೆ.

                   ಭಾರತವು ಇತ್ತೀಚಿನ ಆರ್ಥಿಕ ವರ್ಷದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಜಾಗತಿಕ ಉತ್ಪಾದನೆಯ 50% ಅನ್ನು ಇಲ್ಲಿಂದಲೇ ಒದಗಿಸಿದೆ. FY23 ರಲ್ಲಿ, ಸುಜುಕಿಯ ಜಾಗತಿಕ ಉತ್ಪಾದನೆಯು 2.2 ಲಕ್ಷ ಯುನಿಟ್‌ಗಳಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಭಾರತದ ಸ್ಪರ್ಧಾತ್ಮಕ ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಸುಮಾರು 85% ಬೆಳವಣಿಗೆಯನ್ನು ಹೊಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries